ಬೆಳ್ತಂಗಡಿ: ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಸೆ.8 ರಿಂದ ಸೆ.20ರವರೆಗೆ ನಡೆಯುವ ಡೈಮಂಡ್ ಮತ್ತು ಚೈನ್ ಫೆಸ್ಟನ್ನು ಮಹಾವೀರ ಡ್ರೈವಿಂಗ್ ಸ್ಕೂಲ್ , ಬೆಳ್ತಂಗಡಿಯ ಮಾಲಕರಾದ ಶ್ರೀಮತಿ ಶಾರ್ವಿ ಜೈನ್ ಅವರು ಸೆ.8ರಂದು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಸ್ಥೆಯು ಕೇವಲ ವ್ಯವಹಾರಿಕವಾಗಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿ ಹೊಂದಿರುವುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.ಗ್ರಾಹಕರು ಈಫೆಸ್ಟ್ ನ ಸದುಪಯೋಗಪಡಿಸಿಕೊಂಡು ಅನನ್ಯ ಆಯ್ಕೆಯ ಆಭರಣಗಳನ್ನು ಖರೀದಿಸಿ ಎಂದರು.ಈ ಬಾರಿಯ ಫೆಸ್ಟ್ ನಲ್ಲಿ ಅಮೂಲ್ಯ ಮತ್ತು ಕಿಸ್ನ ಬ್ರಾಂಡ್ ನ ವಜ್ರಾಭರಣಗಳನ್ನು ಮತ್ತು ವೈವಿಧ್ಯಮಯವಾದ ಚೈನ್ಸ್ ಗಳ ಅನಾವರಣಗೊಳಿಸಲಾಯಿತು.
ಸಂಸ್ಥೆಯ ಉಪಶಾಖಾ ಪ್ರಬಂಧಕರಾದ ಸತ್ಯ ಗಣೇಶ್ ಅವರು ಸ್ವಾಗತಿಸಿದರು. ಸಂಸ್ಥೆಯ ಶಾಖಾ ಪ್ರಬಂಧಕರಾದ ಗುರುರಾಜ್ ಅವಭೃತ ಅವರು ಫೆಸ್ಟ್ ನ ವಿಶೇಷತೆಯನ್ನು ತಿಳಿಸಿದರು.
ಸಂಸ್ಥೆಯ ಜನಾರ್ಧನ್ ಅವರು ವಂದಿಸಿದರು. ಸಿಬ್ಬಂದಿ ಟೀನಾ ಜಾರ್ಜ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.