ಜಿಲ್ಲಾ ವಾರ್ತೆ

ಚಾಮಾ೯ಡಿ ಘಾಟ್: ರಾತ್ರಿ ಹೊತ್ತಲ್ಲೂ ಲಘು ವಾಹನಗಳ ಸಂಚಾರಕ್ಕೆ ಡಿ.ಸಿ ಅನುಮತಿ

ಬೆಳ್ತಂಗಡಿ : ಸತತ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗುವ ಸಾಧ್ಯತೆ ಹಿನ್ನಲೆ ರಾತ್ರಿ ಸಂದರ್ಭ ವಾಹನ ಸಂಚಾರಕ್ಕೆ ಬಂದ್ ಆಗಿದ್ದ ಚಾರ್ಮಾಡಿ ಘಾಟ್ ನಲ್ಲಿ ಇದೀಗ ರಾತ್ರಿಯೂ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ದ.ಕ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದುವರೆಗೆ ಲಘು ವಾಹನಗಳಾದ ಟೆಂಪೊ ಟ್ರಾವೆಲ್ಲರ್, ವ್ಯಾನ್, ಕಾರು, ಜೀಪ್, ಆಂಬುಲೆನ್ಸ್, ಎವಿ, ದ್ವಿಚಕ್ರ ವಾಹನಗಳು ಬೆಳಗ್ಗೆ 6ರಿಂದ ಸಂಜೆ 7ರ ವರೆಗೆ ಮಾತ್ರ ಸಂಚರಿಸಬಹುದಿತ್ತು. ಸದ್ಯ ಈ ನಿರ್ಬಂಧ ತೆರವುಗೊಳಿಸಲಾಗಿದೆ.
ಆದರೆ ಬುಲೆಟ್ ಟ್ಯಾಂಕರ್, ಶಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನ, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಆಕ್ಸೆಲ್ ಟ್ರಕ್, ಟ್ರಕ್ ಟೀ ಲರ್, ಕೆಎಸ್ಸಾರ್ಟಿಸಿ ರಾಜಹಂಸ ಮತ್ತಿತರ ಅಧಿಕ ಭಾರದ ಸರಕು ಸಾಗಾಟ ವಾಹನ ಸಂಚಾರ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ದಿನದ 24 ಗಂಟೆ ಚಾರ್ಮಾಡಿ ಮೂಲಕ ಟೆಂಪೋ ಟ್ರಾವೆಲ್ಲರ್, ಆಂಬ್ಯುಲೆನ್ಸ್, ಕಾರು, ಜೀಪು, ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ಸಂಚಾರ ನಡೆಸಬ
ಹುದಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಿಮ್ಮದೊಂದು ಉತ್ತರ