ಕ್ರೈಂ ವಾರ್ತೆ

ಧರ್ಮಸ್ಥಳ ಶಾಂತಿವನಕ್ಕೆ ಚಿಕಿತ್ಸೆಗೆ ಬಂದ ಮಹಿಳೆಯ ಬ್ಯಾಗ್ ನಿಂದ ನಗದು ಸಹಿತ ಚಿನ್ನದ ಮಾಂಗಲ್ಯ ಸರ ಕಳವುಗೈದ ಆರೋಪಿ ಬೆಂಗಳೂರಿನಲ್ಲಿ ಸೆರೆ

ಧಮ೯ಸ್ಥಳ: ಬೆಂಗಳೂರಿನಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯ ಶಾಂತಿವನಕ್ಕೆ ಚಿಕಿತ್ಸೆ ಬಗ್ಗೆ ಚಿಕಿತ್ಸೆಗೆ ಬಂದಿದ್ದ ಮಹಿಳೆ ಯ ಬ್ಯಾಗ್ ನಿಂದ 2 ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ ರೂಂ 6 ಸಾವಿರ ನಗದನ್ನು ಅಪಹರಿಸಿದ ಆರೋಪಿಯನ್ನು ಧಮ೯ಸ್ಥಳ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬೆಂಗಳೂರಿನ ನಿವಾಸಿ ವರ್ಷಾ ಎಸ್. (26ವ) ಬಂಧಿತ ಆರೋಪಿಯಾಗಿದ್ದು, ಆತನಿಂದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಬೆಂಗಳೂರಿನ ಶ್ರೀಮತಿ ಹೇಮಾ ಎಂಬವರು ತಮ್ಮ ಕುಟುಂಬದೊಂದಿಗೆ 2022 ಜೂನ್ 30 ರಂದು ಬೆಂಗಳೂರಿನಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯ ಶಾಂತಿವನಕ್ಕೆ ಚಿಕಿತ್ಸೆಗೆ ಬಂದು ದಾಖಲಾಗಿದ್ದು,
ಚಿಕಿತ್ಸೆಯಲ್ಲಿರುತ್ತಾ ತನ್ನಲ್ಲಿದ್ದ 2 ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000 ರೂ ನಗದನ್ನು ವ್ಯಾನಿಟಿ ಬ್ಯಾಗನಲ್ಲಿಟ್ಟು ಯೋಗಕ್ಕೆ ಹೋಗಿದ್ದು ಮರಳಿ ಬಂದು ನೋಡಿದಾಗ ಅದರಲ್ಲಿದ್ದ 80 ಗ್ರಾಂ ತೂಕದ 2 ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000 ರೂ ನಗದು‌ ಕಳವಾಗಿತ್ತು ಈ ಬಗ್ಗೆ ಅವರು ಧಮ೯ಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದರು.
‌ ಸದ್ರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆಯ ರವರ ನಿರ್ದೇಶನದಂತೆ ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ, ಬಂಟ್ವಾಳ ಡಿ.ವೈಎಸ್.ಪಿ ಪ್ರತಾಪ್ ಸಿಂಗ್ ಥೋರಾಟ್ ರವರ ಮಾರ್ಗದರ್ಶನದಲ್ಲಿ ಇದರ ಜಾಲ ಬೆನ್ನತ್ತಿದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ.ರವರ ವಿಶೇಷ ತಂಡ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಅನಿಲ್ ಕುಮಾರ ಡಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್.ಸಿ ಬೆನ್ನಿಚ್ಚನ್, ಹೆಚ್.ಸಿ ಪ್ರಶಾಂತ, ಹೆಚ್.ಸಿ ರಾಜೇಶ್, ಹೆಚ್.ಸಿ  ಸತೀಶ ನಾಯ್ಕ , ಪಿ.ಸಿ ರಾಧ ಕೋಟ್ಯಾನ್ ಮತ್ತು .ಹೆಚ್.ಸಿ ಪ್ರಮೋದಿನಿಯವರು ಆರೋಪಿಯ ಪತ್ತೆ ಬಗ್ಗೆ ಸುಮಾರು 5 ತಿಂಗಳಿನಿಂದ ವಿಶೇಷವಾಗಿ ಕರ್ತವ್ಯ ನಿರ್ವಹಿಸಿ ಆರೋಪಿಯ ಇರುವಿಕೆಯ ಬಗ್ಗೆ ಪತ್ತೆ ಮಾಡಿ ಸಿ,ಪಿಐ ರವರವ ವಿಶೇಷ ತಂಡವು ಪಿ.ಎಸ್.ಐ. ಅನಿಲ್ ಕುಮಾರ ಡಿ ರವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಆರೋಪಿಯ ಇರುವಿಕೆಯನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿ, 65 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಸರದ ಮೌಲ್ಯ ರೂ. 2,50,000 ಅಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಿಮ್ಮದೊಂದು ಉತ್ತರ