ಪುತ್ತೂರಿನ ಕೆಮ್ಮಿಂಜೆ ಗ್ರಾಮದ ಕಟ್ಟಡವೊಂದರಲ್ಲಿ ಕುಡಿದು ಮತ್ತಿನಲ್ಲಿ ಅಣ್ಣ ತಮ್ಮನ್ನು ಕೊಲೆ ಗೈದಘಟನೆ ನಡೆದಿದೆ.
ಪುತ್ತೂರಿನ ಕೆಮ್ಮಿಂಜೆಯಲ್ಲಿ ನಿಂಗನ ಗೌಡ ಹಾಗೂ ಒಡಹುಟ್ಟಿದ ತಮ್ಮ ಮಾದೇವಪ್ಪ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರು ಮೂಲತಃ ಹಾವೇರಿ ಜಿಲ್ಲೆಯ ಹೊಸೂರಿನವರು. ಗುರುವಾರ ರಾತ್ರಿ ಇವರಿಬ್ಬರೂ ಕಂಠಪೂರ್ತಿ ಕುಡಿದು ಜಗಳ ಮಾಡುತ್ತಿದ್ದರು. ಈ ವೇಳೆ, ನಿಂಗನ ಗೌಡನು, ಮಾದೇವಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡು ಮಾದೇವಪ್ಪ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಪುತ್ತೂರು ನಗರ ಠಾಣಾ ಅ.ಕ್ರ 97/2022 ಕಲಂ 302 IPC ರ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.