ಕ್ರೈಂ ವಾರ್ತೆ

ಸಮಾಜದಲ್ಲಿ ಶಾಂತಿ ಕದಡಲು ಯತ್ನ: ರಸ್ತೆಯಲ್ಲಿ ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ಬರೆದ ಕಿಡಿಗೇಡಿಗಳು

ಪುಂಜಾಲಕಟ್ಟೆ : ಕರಾವಳಿಯಲ್ಲಿ ಕಿಡಿಗೇಡಿಗಳು ಮತ್ತೆ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ.

ಅ.3 ರಂದು ರಾತ್ರಿಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ನೈನಾಡು- ಗೋಳಿಯಂಗಡಿ ಕಡೆಗೆ ಹೋಗುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು “ಚಡ್ಡಿಗಳೇ ಎಚ್ಚರಿಕೆ” “ಪಿಎಫ್‌ಐ- ನಾವು ಮರಳಿ ಬರುತ್ತೇವೆ” ಎಂದು ಬಿಳಿ ಬಣ್ಣದ ಸ್ಪ್ರೇ ಪೈಂಟಿನಿಂದ ಡಾಮಾರು ರಸ್ತೆಯ ಮೇಲೆ ಬೆದರಿಕೆ ಬರಹಗಳನ್ನು ಬರೆದು ಬಹಿರಂಗ ಬೆದರಿಕೆ ಹಾಕಿದ್ದಾರೆ. .

ಡಾಮಾರು ರಸ್ತೆಯನ್ನು ಹಾಳು ಮಾಡಿ, ಸಮಾಜದ ಅಶಾಂತಿಗೆ ಕೋಮುದ್ವೇಷಕ್ಕೆ ಕಾರಣವಾದ ಬರಹದ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸ್ಥಳೀಯರು ಪುಂಜಾಲ ಕಟ್ಟೆ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣ ಕ್ರಮ ಜರುಗಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ನಿಮ್ಮದೊಂದು ಉತ್ತರ