ಕ್ರೈಂ ವಾರ್ತೆ

ಕಂದಾಯ ಇಲಾಖೆಯ ದಾಖಲೆಗಳ ದುರುಪಯೋಗ ಪ್ರಕರಣ : ಗ್ರಾಮಲೆಕ್ಕಿಗ ಜಯಚಂದ್ರ ಅಮಾನತು

ಬೆಳ್ತಂಗಡಿ : ಕಂದಾಯ ಇಲಾಖೆಯ ದಾಖಲೆಗಳನ್ನು ದುರುಪಯೋಗ ಮಾಡಿದ ಪ್ರಕರಣ ಸಂಬಂಧಪಟ್ಟಂತೆ ಗ್ರಾಮಲೆಕ್ಕಿಗ ಹಾಗೂ ಬ್ರೋಕರ್ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ದೂರು ನೀಡಿದ್ದು ಅದರಂತೆ ಬೆಳ್ತಂಗಡಿ ಪೊಲೀಸರು ಸೆ. 7 ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿಯ ಸಿ.ಎ ಕೆರೆ ಮನೆಯಿಂದ ಗ್ರಾಮಕರಣಕ ಜಯಚಂದ್ರ ಅವನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದಾರೆ.ನ್ಯಾಯಾಲಯ ಆರೋಪಿ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

‌‌ಸೆ.9 (ಶುಕ್ರವಾರ) ರಂದು ಬೆಳ್ತಂಗಡಿ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.

ಜಯಚಂದ್ರ ಅಮಾನತು: ಪ್ರಕರಣ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಯವರು ಸರಕಾರಿ ದಾಖಲೆ ದುರುಪಯೋಗ ಪ್ರಕರಣ ಸಂಬಂಧ ಬಂಧನವಾಗಿರುವ ಗ್ರಾಮಲೆಕ್ಕಿಗ ಜಯಚಂದ್ರನ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಹೋಬಳಿ ತೆಕ್ಕಾರು, ಬಾರ್ಯ, ಪುತ್ತಿಲ ಮತ್ತು ಕರಾಯ, ತಣ್ಣಿರುಪಂಥ ಗ್ರಾಮದ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಚಂದ್ರನನ್ನು ಕರ್ತವ್ಯ ಲೋಪ ಎಸಗಿದರಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ನಿಮ್ಮದೊಂದು ಉತ್ತರ