ಬಂಟ್ವಾಳ; ಚಾಲಕ ನಿದ್ದೆಯ ಮಂಪರಿನಲ್ಲಿದ್ದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಕಾರು ಚಾಲಕ, ನರಿಕೊಂಬು ನಿವಾಸಿ ಕುಶಾಂತ್ ಯಾವುದೇ ಗಾಯವಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯ ಪಾಣೆಮಂಗಳೂರು ಎಂಬಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಕೆಳಗೆ ಸುಮಾರು 30 ಅಡಿ ಅಳಕ್ಕೆ ಕಾರು ಉರುಳಿ ಬಿದ್ದಿದೆ. ಕುಶಾಂತ್ ಅವರು ಜನರೇಟರ್ ಮೆಕ್ಯಾಕನಿಕ್ ಆಗಿದ್ದು, ಉಡುಪಿಯಲ್ಲಿ ಜನರೇಟರ್ ರಿಪೇರಿ ಮುಗಿಸಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ.ಉ
ಉಡುಪಿಯಿಂದ ಬರುವ ವೇಳೆ ಮಂಗಳೂರಿನಲ್ಲಿ ಇಬ್ಬರು ಕೆಲಸಗಾರರನ್ನು ಮನೆಗೆ ಡ್ರಾಪ್ ಮಾಡಿ ಬಳಿಕ ಕುಶಾಂತ್ ಒಬ್ಬರೇ ಕಾರಿನಲ್ಲಿ ಬರುತ್ತಿದ್ದರು. ಮುಂಜಾವಿನ ವೇಳೆ ಸುಮಾರು 2.50 ರ ವೇಳೆ ನಿದ್ದೆಯ ಮಂಪರಿನಲ್ಲಿ ಕಾರು ನಿಯಂತ್ರಣ ತಪ್ಪಿ ಕಳೆಗೆ ಬಿದ್ದಿದೆ.