ಕ್ರೈಂ ವಾರ್ತೆ

ಬಂಟ್ವಾಳ ಚಂಡ್ತಿಮಾರ್ ಬಳಿ ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ಭೀಕರ‌‌ ಅಪಘಾತ:  ಮಡಂತ್ಯಾರಿನ ಕೀರ್ತಿ ಕ್ಯಾಟರಿಂಗ್ ಮಾಲಕ ರೋಶನ್ ಸೆರಾವೊ ಮೃತ್ಯು

ಮಡಂತ್ಯಾರು : ಬಿ.ಸಿ ರೋಡ್ ಪುಂಜಾಲಕಟ್ಟೆ ಹೆದ್ದಾರಿ ಬಂಟ್ವಾಳ ಸಮೀಪದ ಚಂಡ್ತಿಮಾರ್ ಬಳಿ ಜೂ.1ರಂದು ಟ್ಯಾಂಕರ್ ಹಾಗೂ ಮಾರುತಿ ಕಾರಿನ ಮಧ್ಯೆ ನಡುವೆ ಸಂಭವಿಸಿದ ಭೀಕರ‌‌ ಅಪಘಾತದಲ್ಲಿ ಮಡಂತ್ಯಾರಿನ ಕೀರ್ತಿ ಕ್ಯಾಟರಿಂಗ್ ಮಾಲಕ ರೋಶನ್ ಸೆರಾವೊ(43ವ) ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.


ಇವರು ನಾಳೆ ಕ್ಯಾಂಟರಿಂಗ್ ಗಾಡಿ ಮಂಗಳೂರಿನ ಮೀನು ತರಲು‌ ಹೋದವರು, ಮರಳಿ ಮಡಂತ್ಯಾರು ಕಡೆ ‌ ಬರುತ್ತಿರುವ ಸಂದರ್ಭದಲ್ಲಿ ‌ಈ. ದುಘ೯ಟನೆ ಸಂಭವಿಸಿದೆ.


ಇವರು ಹಲವು ವರ್ಷಗಳಿಂದ ಮಡಂತ್ಯಾರಿನಲ್ಲಿ, ಕೀರ್ತಿ ಕ್ಯಾಟರಿಂಗ್ ನ್ನು ನಡೆಸಿಸಿಕೊಂಡು ಬರುತ್ತಿದ್ದು,
ಎಲ್ಲರಿಗೂ ಚಿರಪರಿಚಿತರಾಗಿದ್ದರು ಮೃತರು ಪತ್ನಿ ಅಮಿತ, ಇಬ್ಬರು ಮಕ್ಕಳಾದ  ಕೀತಿ೯ ಮತ್ತು ಕೀತ೯ನಾ, ಬಂಧು ‌ವಗ೯ದವರನ್ನು ಅಗಲಿದ್ದಾರೆ.

 

ನಿಮ್ಮದೊಂದು ಉತ್ತರ