ಕ್ರೈಂ ವಾರ್ತೆ

ಬಂಟ್ವಾಳದಲ್ಲಿ ಎರಡು ಬೈಕ್‌ಗಳ ಕಳವು ಸಬರಬೈಲು ಮತ್ತು ಮಾಲಾಡಿ ನಿವಾಸಿಗಳಿಬ್ಬರು ಸೇರಿ ಮೂವರ ಬಂಧನ

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಮಣಿಹಳ್ಳ ಬಳಿ ಹಾಗೂ ಬಿ ಮೂಡ ಗ್ರಾಮದ ರೈಲ್ವೇ ಸ್ಟೇಷನ್ ಬಳಿ ನಿಲ್ಲಿಸಿದ್ದ, ಎರಡು ಬೈಕ್‌ಗಳನ್ನು ಕಳವುಗೈದ ಪ್ರಕರಣದಲ್ಲಿ ಬೆಳ್ತಂಗಡಿ ತಾಲೂಕಿನ ಇಬ್ಬರು ಸೇರಿದಂತೆ ಮೂರು ಮಂದಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿ, ಬೈಕ್‌ಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.


ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸಬರಬೈಲು ನಿವಾಸಿ ಸಿದ್ದಿಕ್ @ ಅಬೂಬ್ಬಕ್ಕರ್ ಸಿದ್ದಿಕ್ (27ವ), ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ಅಕ್ಬರ್( 32 ವರ್ಷ), ಮಾಲಾಡಿ ಗ್ರಾಮದ ಉರ್ಕೆದಬೈಲು ನಿವಾಸಿ ಸಮೀರ್ @ ಮೊಹಮ್ಮದ್ ಸಮೀರ್ (23 ವರ್ಷ) ಎಂಬವರನ್ನು ಪೊಲೀಸರು ಬಂಧಿಸಿ, ಕಳವಾದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

– ‌‌   ಮ‌ಹಮ್ಮದ್ ಸಿದ್ದೀಕ್

ಪ್ರಕರಣದ ಹಿನ್ನಲೆ: ಕಳೆದ ಎ.27 ರಂದು ರಾತ್ರಿ ಬಂಟ್ವಾಳ ಕಸಬಾ ಗ್ರಾಮದ ಮಣಿಹಳ್ಳ ಎಂಬಲ್ಲಿ ಕಡಂಬಳಿಕೆ ನಿವಾಸಿ ಮುಖೇಶ್ ಕುಲಾಲ್ ಎಂಬವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್( ಕೆಎ 19-ಹೆಚ್‌ಹೆಚ್ 8075)ಕಳವಾದ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು. ಬೈಕ್‌ನ ಮೌಲ್ಯ ಸುಮಾರು 1 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

– ‌‌   ಮ‌‌ಹಮ್ಮದ್ ಶಮೀರ್

ಇನ್ನೊಂದು ಪ್ರಕರಣದಲ್ಲಿ ಕಳೆದ ಎ.23 ರಂದು ಮದ್ಯರಾತ್ರಿ ಬಂಟ್ವಾಳದ ಬಿ ಮೂಡ ರೈಲ್ವೇ ಸ್ಟೇಷನ್ ಬಳಿ, ರೈಲ್ವೆ ಇಲಾಖೆಯ ಸಿಬ್ಬಂದಿ ಅನೂಫ್ ಎಂಬವರು ನಿಲ್ಲಿಸಿದ್ದ ಬೈಕ್(ಕೆಎಲ್-60-ಇ-4280) ಕಳವಾಗಿದ್ದು, ಈ ಬಗ್ಗೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡು ಪ್ರಕರಣಗಳ ಬಗ್ಗೆ ತನಿಖೆ ಆರಂಭಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರ ತಂಡವು ಆರೋಪಿಗಳಾದ ಸಿದ್ದಿಕ್ @ ಅಬೂಬ್ಬಕ್ಕರ್ ಸಿದ್ದಿಕ್, ಅಕ್ಬರ್, ಸಮೀರ್ @ ಮೊಹಮ್ಮದ್ ಸಮೀರ್ ಎಂಬವರನ್ನು ಬಂಧಿಸಿ, ಕಳವಾದ ಎರಡು ಬೈಕ್ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ ಇಯೋನ್ ಕಾರನ್ನು ವಶಪಡಿಸಿಕೊಂಡಿದ್ದಾರೆ.

– ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌      ಅಕ್ಬರ್

ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ. ಜಿಲ್ಲೆ ಮಂಗಳೂರು ರವರ ಮಾರ್ಗದರ್ಶನದಂತೆ, ಸಹಾಯಕ ಪೊಲೀಸ್ ಅಧೀಕ್ಷಕರು ಶಿವಾಂಸು ರಜಪೂತ್ ಮತ್ತು ಪೊಲೀಸ್ ನಿರೀಕ್ಷಕರಾದ ವಿವೇಕಾನಂದ ರವರ ನಿರ್ದೇಶನದಂತೆ ಪಿಎಸ್‌ಐಗಳಾದ ಅವಿನಾಶ್ (ಕಾ&ಸು) ಮತ್ತು ಕಲೈಮಾರ್ (ತನಿಖೆ-1) ರವರ ನೇತೃತ್ವದಲ್ಲಿ ವಿಶೇಷ ತಂಡದ ಸಿಬ್ಬಂದಿಯವರಾದ ನಾರಾಯಣ, ಇರ್ಷಾದ್ ಪಿ, ಗಣೇಶ್, ಮನೋಹರ, ಪ್ರವೀಣ್, ಮೋಹನ, ನಾಗರಾಜ್, ಹಾಗೂ ಗಣಕಯಂತ್ರ ವಿಭಾಗದ ಸಿಬ್ಬಂದಿಯವರಾದ ಸಂಪತ್ ಮತ್ತು ದಿವಾಕರರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ನಿಮ್ಮದೊಂದು ಉತ್ತರ