ಬೆಳ್ತಂಗಡಿ : ಕೆಲಸ ಮುಗಿಸಿ ರಾತ್ರಿ ಮನೆಗೆ ಹೋಗುವ ಸಂದಭ೯ ಬೈಕ್ ಅಪಘಾತವಾಗಿ ಸವಾರ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಶಾರದಾನಗರದಲ್ಲಿ ಮೇ.7ರಂದು ನಡೆದಿದೆ.
ಸೋಮಂತ್ತಡ್ಕ ದಿಂದ ರಾತ್ರಿ ಹನ್ನೊಂದು ಗಂಟೆಗೆ ಕೆಲಸ ಮುಗಿಸಿ ಕಡಿರುದ್ಯಾವರದ ಮನೆಗೆ ವಾಪಸ್ ಬೈಕ್‌ನಲ್ಲಿ ಬರುತ್ತಿದ್ದಾಗ ಮುಂಡಾಜೆ ಗ್ರಾಮದ ಶಾರದಾ ನಗರದ ಬಳಿ ಬೈಕ್ ಕಂಬಕೈ ಡಿಕ್ಕಿ
ಆಗಿ ಸವಾರ ಕಡಿರುದ್ಯಾವರ ನಿವಾಸಿ ಯಶೋಧರ ದೇವಾಡಿಗ(30) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಸಹ ಸವಾರ ಕಡಿರುದ್ಯಾವರ ನಿವಾಸಿ ಅಶೋಕ್ ಗೌಡ(32) ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.