ಕ್ರೈಂ ವಾರ್ತೆ

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಆರೋಪಿ ಬಂಧನ-ರೂ.2.40 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಪೊಲೀಸರ ಯಶಸ್ವಿ ಕಾರ್ಯಾಚರಣೆಗೆ ಸಾರ್ವಜನಿಕರ ಶ್ಲಾಘನೆ- ತಂಡಕ್ಕೆ ವಿಶೇಷ ಬಹುಮಾನ ಘೋಷಣೆ

ಧರ್ಮಸ್ಥಳ: ಧರ್ಮಸ್ಥಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಕುಂದಾಪುರದ ಶ್ರೀಧರ ಬಾಯರಿ ಎಂಬವರು ನೇತ್ರಾವತಿ ಸ್ನಾನ ಘಟದಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಅವರ ಬ್ಯಾಗ್‌ನಿಂದ ನಗದು ಸಹಿತ ರೂ.2.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಮಹಾರಾಷ್ಟ್ರದ ಸೊಲ್ಲಾಪುರ ಎಂಬಲ್ಲಿಂದ ಬಂಧಿಸಿ ಧರ್ಮಸ್ಥಳ ಠಾಣೆಗೆ ಕರೆತಂದಿದ್ದಾರೆ.
.ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಪಾರೆ ಗ್ರಾಮದ ಇಂದಿರಾನಗರ ಮನೆ ನಿವಾಸಿ ನಂದನ್‌ಲಾಲ್ ಎಂಬವರ ಪುತ್ರ ಮಿತುನ್ ಚೌವಾಣ್( 30 ವರ್ಷ) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯ ಮನೆಯಿಂದ ನಗದು ಸಹಿತ ರೂ.2.40ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಘಟನೆ ಹಿನ್ನಲೆ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕುಂದಾಪುರ ಮೂಲಕ ಶ್ರೀಧರ ನಾಯರಿ ಅವರು ಯಾತ್ರಾರ್ಥಿಯಾಗಿ ಬಂದು, ಇಲ್ಲಿಯ ನೇತ್ರಾವತಿ ಸ್ನಾನ ಘಟದಲ್ಲಿ ಬ್ಯಾಗ್‌ನ್ನು ಇಟ್ಟು ಸ್ನಾನಕ್ಕಾಗಿ ನದಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಯಾರೋ ಕಳ್ಳರು ಅವರ ಬ್ಯಾಗ್‌ನಿಂದ ನಗದು ಸಹಿತ ಚಿನ್ನಾಭರಣವನ್ನು ಕಳವು ಮಾಡಿದ್ದರು. ಸ್ನಾನ ಮಾಡಿ ಬಟ್ಟೆ ಹಾಕಿಕೊಳ್ಳು ಬ್ಯಾಗ್‌ನ್ನು ನೋಡಿದಾಗ ಅವರೊಳಗಿದ್ದ ನಗದು ಸಹಿತ ರೂ.2.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಶ್ರೀಧರ ನಾಯರಿ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಕಳವು ಬಗ್ಗೆ ದೂರು ನೀಡಿದ್ದು, ಠಾಣೆಯಲ್ಲಿ ಅ.ಕ್ರ 06-2023ರಂತೆ ದೂರು ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆಯನ್ನು ಆರಂಭಿಸಿದ ಧರ್ಮಸ್ಥಳ ಪೊಲೀಸರು ವಿವಿಧ ಮೂಲಗಳ ಮೂಲಕ ತನಿಖೆ ನಡೆಸಿ ಇದೀಗ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಪಾರೆ ಗ್ರಾಮದ ಇಂದಿರಾನಗರ ನಿವಾಸಿ ಮಿತುನ್ ಚೌಹಾಣ್ ಎಂಬತನನ್ನು ಬಂಧಿಸಿ ಆತನ ಮನೆಯಿಂದ ರೂ.80ಸಾವಿರ ಮೌಲ್ಯದ ಒಂದು ಚಿನ್ನದ ಮಾಲೆ, ರೂ.32 ಸಾವಿರ ಮೌಲ್ಯದ ಒಂದು ಚಿನ್ನದ ಲಕ್ಷ್ಮಿಮಾಲೆ, ರೂ.65ಸಾವಿರ ಮೌಲ್ಯದ ಒಂದು ಚಿನ್ನದ ಸರ, ರೂ.40 ಸಾವಿರ ಮೌಲ್ಯದ ಒಂದು ಬ್ರಾಸ್‌ಲೈಟ್, ರೂ.14,500 ಮೌಲ್ಯದ ಇನ್ನೊಂದು ಬ್ರಾಸ್‌ಲೈಟ್, ರೂ. 8,500 ಮೌಲ್ಯದ ಚಿನ್ನದ ಉಂಗುರ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಭರಣಗಳ ಮೌಲ್ಯ ರೂ.2.40 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಯು ದೇಶದ ವಿವಿಧ ಪ್ರಸಿದ್ಧ ಯಾತ್ರ ಸ್ಥಳಗಳಿಗೆ ಹೋಗಿ ಕಳ್ಳತನ ಮಾಡುವ ಕೃತ್ಯವನ್ನು ನಡೆಸುತ್ತಿದ್ದು, ಈಗಾಗಲೇ ಈತನನ ಮೇಲೆ ಮಹಾರಾಷ್ಟ್ರ ರಾಜ್ಯದ ಪೂಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರತಾಪ್ ಸಿಂಗ್ ತೋರಟ್ ಮತ್ತು ಬೆಳ್ತಂಗಡಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್‌ರವರ ನೇತೃತ್ವದಲ್ಲಿ ಧರ್ಮಸ್ಥಳ ಠಾಣೆಯ ಪಿಎಸ್‌ಐ ಕೃಷ್ಣಕಾಂತ ಪಾಟೀಲ್‌ರವರ ವಿಶೇಷ ತಂಡದ ಸಿಬ್ಬಂದಿಗಳಾದ ಹೆಚ್.ಸಿಗಳಾದ ಬೆನ್ನಿಚ್ಚನ್, ಪ್ರಶಾಂತ್, ರಾಹುಲ್ ವಿಜು, ರವೀಂದ್ರ, ಕೃಷ್ಣಪ್ಪ, ಪಿ.ಸಿ ಸತೀಶನಾಯ್ಕ ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್ ಮತ್ತು ದಿವಾಕರ ರವರು ಭಾಗವಹಿಸಿದ್ದರು. ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾಋಎ.
ಪೊಲೀಸರಿಗೆ ವಿಶೇಷ ಬಹುಮಾನ:
ಈ ಕಳವು ಪ್ರಕರಣ ಭೇದಿಸಿ ಮಹಾರಾಷ್ಟ್ರದಲ್ಲಿ ಕಳ್ಳನನ್ನು ಪತ್ತೆ ಹಚ್ಚಿ ಬಂಧಿಸಿ, ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧಿಕ್ಷಕರು ಬಹುಮಾನವನ್ನು ಘೋಷಿಸಿರುತ್ತಾರೆ.

ನಿಮ್ಮದೊಂದು ಉತ್ತರ