ಶಿಶಿಲ: ಶಿಶಿಲ ಗ್ರಾಮದ ಬಾಳೆಗುಂಡಿ ಎಂಬಲ್ಲಿ ವಾಸ್ತವ್ಯವಿರುವವ್ಯಕ್ತಿಯೋರ್ವರು ತಮ್ಮ ಪತ್ನಿಯ ತವರು ಮನೆಯಲ್ಲಿದ್ದ ತಮ್ಮ
ಇಬ್ಬರು ಮಕ್ಕಳಿಗೆ ಬಲವಂತವಾಗಿ ವಿಷ ಬೆರೆಸಿದ ಜ್ಯೂಸ್ ಕುಡಿಸಿ, ತಾನೂ ವಿಷ ಸೇವೆಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ
ಅ.5 ರಂದು ವರದಿಯಾಗಿದೆ.
ಘಟನೆಯ ವಿವರ: ಶಿಶಿಲ ಗ್ರಾಮದ ಬಾಳೆಗುಂಡಿ ನಿವಾಸಿ ವಿಶ್ವನಾಥ ರವರಿಗೆ ಕಡಬ ತಾಲೂಕಿನ ಬಲ್ಯ ಗ್ರಾಮದಗೋಣಿಗುಡ್ಡೆ ಎಂಬಲ್ಲಿಯ ಚಂದ್ರಾವತಿ ಎಂಬವರೊಂದಿಗೆ
ಸುಮಾರು 11 ವರ್ಷಗಳ ಹಿಂದೆ ವಿವಾಹವಾಗಿತ್ತು. ಕಳೆದ 2-3ವರ್ಷಗಳಿಂದ
ವಿಪರೀತ ಕುಡಿತದ ಚಟವನ್ನು ಹೊಂದಿದ್ದ
ವಿಶ್ವನಾಥ ರವರು ಪ್ರತಿದಿನವೂ ತಮ್ಮ ಪತ್ನಿಯೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೆ ಗಲಾಟೆ ಮಾಡುತ್ತಿದ್ದರು.
ತಮ್ಮ ಪತಿಯ ಕಿರಿಕಿರಿಯನ್ನು ಅನುಭವಿಸಲು
ಕಷ್ಟಸಾಧ್ಯವಾದ ಕಾರಣ ಚಂದ್ರಾವತಿಯವರು ತಮ್ಮ ತವರುಮನೆಯಾದ ಕಡಬ ತಾಲೂಕಿನ ಬಲ್ಯ ಗ್ರಾಮದ ಗೋಣಿಗುಡ್ಡೆ ಎಂಬಲ್ಲಿಯೇ ವಾಸ್ತವ್ಯವಿದ್ದರು.
ಅ.5 ರಂದು ಆರೋಪಿ ವಿಶ್ವನಾಥ ರವರು ತಮ್ಮ ಪತ್ನಿಯ ತವರು ಮನೆಗೆ ತೆರಳಿ ತಮ್ಮ ಮಕ್ಕಳ ಬಗ್ಗೆ ಪತ್ನಿಯಲ್ಲಿ ವಿಚಾರಿಸಿದ್ದರು. ಶಾಲೆಗೆ ಹೋಗಿದ್ದಂತಹ ತಮ್ಮ ಮಕ್ಕಳು ಮರಳಿ ಬರುವವರೆಗೂ ಕಾದು ಕುಳಿತ ಆರೋಪಿ, ಮಕ್ಕಳು ಶಾಲೆಯಿಂದ ಮರಳಿದ ವೇಳೆ ತಮ್ಮ ಇಬ್ಬರೂ ಮಕ್ಕಳಿಗೆ ವಿಷ ಬೆರೆಸಿದ ಜ್ಯೂಸನ್ನು ಬಲವಂತವಾಗಿ ಕುಡಿಸಲು ಯತ್ನಿಸಿದ್ದು, ದೊಡ್ಡ ಮಗ ಸೃಜನ್ ಕುಡಿಯಲು ನಿರಾಕರಿಸಿದ್ದನು. ಬಳಿಕ ಕಿರಿಯ ಮಗ ಮಾನ್ವಿತ್ ನಿಗೆ ಒತ್ತಾಯಪೂ
ರ್ವಕವಾಗಿ ಜ್ಯೂಸ್ ಕುಡಿಸಿದ್ದು, ಜೊತೆಗೆ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಮಾನ್ವಿತ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾನೂ ವಿಷ ಸೇವಿಸಿ ತಮ್ಮ ಇಬ್ಬರು ಮಕ್ಕಳನ್ನು ಕೊಲೆಗೈಯ್ಯಲು ಯತ್ನಿಸಿದ ಆರೋಪಿ ವಿಶ್ವನಾಥ ರವರ ವಿರುದ್ಧ ಚಂದ್ರಾವತಿಯವರು ಕಡಬ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅ ಕ್ರ ನಂಬ್ರ: 84/2021 ಕಲಂ : 307, 328 IPC ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ