ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ನಿವಾಸಿ
ವಿದ್ಯಾರ್ಥಿನಿಯೋವ೯ಳಮೇಲೆ ಬಲತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಬ್ಬರನ್ನು
ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಮೇಲಂತಬೆಟ್ಟು ನಿವಾಸಿ ರವೀಂದ್ರ ಹಾಗೂ ಕೊಕ್ರಾಡಿ ನಿವಾಸಿ ಯೋಗೀಶ್
ಬಂಧಿತ ಆರೋಪಿಗಳಾಗಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಮೇಲಂತಬೆಟ್ಟು ಗ್ರಾಮದ ನಿವಾಸಿ ಯುವತಿಯನ್ನು ಆರೋಪಿಗಳು ಬೇರೆ.,ಬೇರೆ ದಿನಗಳಲ್ಲಿ
ಆಕೆಯ ಮನೆಯ
ಬಳಿ ನಿಜ೯ನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದರೆಂದು ಆರೋಪಿ ಸಲಾಗಿದೆ.
ತನ್ನ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ
ಎಸಗಿ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದ ರವೀಂದ್ರ ಹಾಗೂ ಯೋಗೀಶ ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ಒದಗಿಸಿಕೊಡಬೇಕಾಗಿ
ಯುವತಿ ಬೆಳ್ತಂಗಡಿ
ಠಾಣೆಗೆ ನೀಡಿದ ದೂರಿನಲ್ಲಿ ಒತ್ತಾಯಿಸಿ ದ್ದರು.
ಬೆಳ್ತಂಗಡಿ ಠಾಣೆ ಯಲ್ಲಿ ಇಬ್ಬರು ಮೇಲೂ ಠಾಣಾ ಅ.ಕ್ರ 80/2021 ಕಲಂ: ಕಲಂ: 5,6 ಫೋಕ್ಸೋ ಕಾಯ್ದೆ 2012 & ಕಲಂ:376 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.