ಬೆಳ್ತಂಗಡಿ: ಪಿಕಾಫ್‌ವೊಂದರಲ್ಲಿ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಹಸು ಮತ್ತು ಕರುಗಳನ್ನು ಸಾಗಾಟ ಮಾಡುತ್ತಿರುವುದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿ ಕೇಸು ದಾಖಲಿಸಿಕೊಂಡ ಘಟನೆ ಸೆ.೨೨ರಂದು ವರದಿಯಾಗಿದೆ.
ಬೆಳ್ತಂಗಡಿ ಠಾಣಾ ಸಹಾಯಕ ಉಪ ನಿರೀಕ್ಷಕರಾದ ರಾಮಯ್ಯ ಹೆಗ್ಡೆ ಹಾಗೂ ಸಿಬ್ಬಂದಿಗಳು ರಾತ್ರಿ ಬೆಳ್ತಂಗಡಿ ಕಸಬಾ ಗ್ರಾಮ ಚರ್ಚ್ ಕ್ರಾಸ್ ಬಳಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ನಡೆಸುತ್ತಿರುವಾಗ ಬೆಳ್ತಂಗಡಿ ಕಡೆಯಿಂದ ಪಿಕಾಪ್‌ವೊಂದರಲ್ಲಿ ಚಾಲಕ ಮದುಕರ ಪ್ರಭು ಎಂವರು ಯಾವುದೇ ಪರವಾನಿಗೆ ಇಲ್ಲದೇ 2ಹಸು ಮತ್ತು 2 ಕರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ವಶ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. ೨.೪೨ ಲಕ್ಷ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.