ಕ್ರೈಂ ವಾರ್ತೆ

ಬಾರ್ಯ ಸರಳಿ ಕಟ್ಟೆಯಲ್ಲಿ ಮನೆಯಲ್ಲಿ ಕಳ್ಳತನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

ಬಾರ್ಯ: ಬಾರ್ಯ ಗ್ರಾಮದ ಸರಳಿಕಟ್ಟೆ ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯ ಬೀರುವನಲ್ಲಿದ್ದ ರೂ.1.20 ಲಕ್ಷ ನಗದು ಹಾಗೂ 10 ಪವನ್ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ಸೆ.17 ರಂದು ಬೆಳಕಿಗೆ ಬಂದಿದೆ.


ಬಾರ್ಯ ಗ್ರಾಮದ ಸರಳಿಕಟ್ಟೆ ಬೇನಪ್ಪು ನಿವಾಸಿ ಅಬೂಬಕ್ಕರ್ ಮದನಿ ಎಂಬವರ ಮನೆಯಲ್ಲಿ ಈ ದರೋಡೆ ನಡೆದಿದ್ದು, ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಮನೆಯವರು ಮನೆಗೆ ಮರಳಿದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪುತ್ತೂರು ಡಿವೈಎಸ್ಪಿ ಗಾನ .ಪಿ.ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ ನಿರೀಕ್ಷಕ ಕುಮಾರ್ ಸಿ ಕಾಂಬ್ಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ನಿಮ್ಮದೊಂದು ಉತ್ತರ