ಸೋಣಂದೂರು:ಮಿನಿ ಟೆಂಪೋವೊಂದರಲ್ಲಿ ಅಕ್ರಮವಾಗಿ ಎರಡು ಹೋರಿ ಕರುಗಳನ್ನು ಕೊಂಡೊಯ್ಯುತ್ತಿರುವುದನ್ನು ಪುಂಜಾಲಕಟ್ಟೆ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಕುಟ್ಟಿ ಎಂ.ಕೆ ರವರು ಸಿಬ್ಬಂದಿಗಳೊಂದಿಗೆ ಸೋಣಂದೂರು ಗ್ರಾಮದ, ಸೋಣಂದೂರು ಶಾಲೆ ಬಳಿ ವಾಹನ ತಪಾಸಣೆ ನಡೆಸುತ್ತಿರುವ ಸಮಯ ಸಂಜೆ 4:45 ಗಂಟೆಯ ಸುಮಾರಿಗೆ ಗಣೇಶ್ ಸಬರಬೈಲು ಮನೆ, ಸೋಣಂದೂರು ಮತ್ತು ನವಾಜ್ ಮುಂಡಾಡಿ ಮನೆ, ಸೋಣಂದೂರುಎಂಬವರು ಬೆಳ್ತಂಗಡಿ ಕಡೆಯಿಂದ ಕೆಎ21ಬಿ 9165 ನೇ ನೋಂದಣಿ ಸಂಖ್ಯೆಯ ಮಹೇಂದ್ರ ಕಂಪೆನಿಯ ಆಲ್ಫಾ ಮಿನಿ ಟೆಂಪೋ ವಾಹನದಲ್ಲಿ ಬರುತ್ತಿದ್ದು, ಚಾಲಕನಲ್ಲಿ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಮಿನಿ ಟೆಂಪೋ ಚಾಲಕನು ವಾಹನವನ್ನು ರಸ್ತೆ ಬದಿ ನಿಲ್ಲಿಸಿದ್ದು, ಪರಿಶೀಲಿಸಿ
ದಾಗ ಆರೋಪಿಗಳು 2 ಕಂದು ಬಣ್ಣದ ಹೋರಿ ಕರುಗಳನ್ನು ಯಾವುದೇ ಅಧಿಕೃತ ದಾಖಲಾತಿ ಇಲ್ಲದೆಯೆ ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾ
ತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ 2 ಹೋರಿ ಕರುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮಿನಿ ಟೆಂಪೋ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದು, 2 ಜಾನುವಾರುಗಳ ಒಟ್ಟು ಮೌಲ್ಯ ರೂ. 2 ಸಾವಿರ ಮತ್ತು ವಾಹನದ ಅಂದಾಜು ಮೌಲ್ಯ ರೂ. 1 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.