ಕ್ರೈಂ ವಾರ್ತೆ

ನಾಲ್ಕೂರು ಬರಾಯ ಪಡೋಡಿ ದಿ.ನಾರಾಯಣ ನಾಯ್ಕರ ಪತ್ನಿ ಜಯಂತಿ ಆತ್ಮಹತ್ಯೆ

ಬಳಂಜ: ನಾಲ್ಕೂರು ಗ್ರಾಮದ ಬರಾಯ ಪಡೋಡಿ ಮನೆಯ ದಿ.ನಾರಾಯಣ ನಾಯ್ಕ ಅವರ ಪತ್ನಿ ಜಯಂತಿ (68 ವ) ಅವರು ಇಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರು ಯಾವಾಗಲೂ ಮನೆಯಲ್ಲಿ ಒಬ್ಬರೇ ಇರುತ್ತಿದ್ದರೆನ್ನಲಾಗುತ್ತಿದ್ದು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇನ್ನೂ ತಿಳಿಯಬೇಕಾಗಿದೆ. ಈ ಸಂಬಂಧ ವೇಣೂರು ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಪಂಚಾಯತ್ ನ ಅಧ್ಯಕ್ಷ ಹೇಮಂತ್, ಸದಸ್ಯರು, ಸಿಬ್ಬಂದಿ ವರ್ಗದವರು ಆಗಮಿಸಿ ಅಗತ್ಯ ಕ್ರಮ ಕೈಗೊಂಡರು.

ಮೃತರು ಇಬ್ಬರು ಪುತ್ರರಾದ ರಮೇಶ್ ನಾಯ್, ಬಳಂಜ ಗ್ರಾ.ಪಂ ಸಿಬ್ಬಂದಿ ಅನಂದ್ ನಾಯ್ಕ ಒರ್ವೆ ಪುತ್ರಿ ಸರೋಜ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ