ಕ್ರೈಂ ವಾರ್ತೆ

ಸಹೋದರಿಗೆ ಹಲ್ಲೆ ನಡೆಸಿದ ಸಹೋದರನಿಗೆ ಜೈಲು ಶಿಕ್ಷೆ

ಬೆಳ್ತಂಗಡಿ :ಮುಂಡಾಜೆಯ ವ್ಯಕ್ತಿಯೋರ್ವರು ತನ್ನ ಸಹೋದರಿಗೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿ ನ್ಯಾಯಾ
ಲಯ ಆರೋಪಿಗೆ   ಒಂದೂವರೆ   ವರ್ಷಕಠಿಣಕಾರಾಗ್ರಹ ಶಿಕ್ಷೆ ವಿಧಿಸಿ ತೀಫು೯ ನೀಡಿದೆ.

ಮುಂಡಾಜೆ ಗ್ರಾಮದ ದೇವಿಗುಡಿ ಕೂಳೂರು ನಿವಾಸಿ ಸತೀಶ್ ಯಾನೆ ಸ್ಕಾರ್ಪಿಯೋ ಸತೀಶ್ ಜೈಲು ಶಿಕ್ಷೆಗೆ ಒಳಗಾದವರು. ಸತೀಶ್ ತನ್ನ ಸಹೋದರಿ ಸಜೀದಾ ಎಂಬವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ರಾಡ್ ನಿಂದ  ತಲೆಗೆ ಹೊಡೆದು    .ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ 2013ರ ಎಪ್ರಿಲ್ 13 ರಂದು ನಡೆದಿತ್ತು.ಈ ಬಗ್ಗೆ ಸಜೀದಾ ಯಾನೆ ಸರಿತಾರವರ ಪತಿ ಪ್ರವೀಣ್ ಡಿ ಎಂಬವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನನ್ವಯ ಆಗಿನ ಮುಖ್ಯ ಆರಕ್ಷಕರಾಗಿದ್ದ ಹೊನ್ನಪ್ಪ ಗೌಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಮೊಕದ್ದಮೆಯಲ್ಲಿ ಒಟ್ಟು 8 ಮಂದಿಯನ್ನು ಸಾಕ್ಷಿಗಳಾಗಿ ವಿಚಾರಿಸಲಾಗಿದ್ದು, ವಾದ ವಿವಾದ
ಗಳನ್ನು ಆಲಿಸಿದ ಬೆಳ್ತಂಗಡಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಲಯದ ನ್ಯಾಯಾಧೀಶರಾದ ಸತೀಶ್ ಕೆ.ಜಿ. ಯವರು ಆರೋಪ ಸಾಬೀತು ಆಗಿದೆ ಎಂದುಪರಿಗಣಿಸಿ ಐಪಿಸಿ ಕಲಂ 324 ರಡಿ ಅಪರಾಧಕ್ಕಾಗಿ 1 ವರ್ಷ ಕಠಿಣ ಕಾರಾಗ್ರಹ ಶಿಕ್ಷೆ 5000/- ದಂಡ, ದಂಡ ತೆರಲು ತಪ್ಪದಲ್ಲಿ 6 ತಿಂಗಳ ಸಾದಾ ಕಾರಾಗ್ರಹ ಶಿಕ್ಷೆ ಹಾಗೂ ಸೆ.504ರಡಿ 6 ತಿಂಗಳು ಕಾರಾಗ್ರಹ ಶಿಕ್ಷೆ ಹಾಗೂ 2000/- ದಂಡ, ತೆರಲು ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀಪು೯ ನೀಡಿದ್ದಾರೆ.
ನೊಂದ ಗಾಯಾಳು ಸರಿತ ಇವರಿಗೆ ಸೂಕ್ತ ಪರಿಹಾರ ಪಡೆಯುವರೇ ಆಗಸ್ಟ್ 7ರಂದು ಮಂಗಳೂರಿನ ದ.ಕ. ಜಿಲ್ಲಾ ಕಾನೂನು ಸೇವೆಗಳು ಪ್ರಾಧಿಕಾರಕ್ಕೆ ಹಾಜರಾಗುವಂತೆ ತೀರ್ಪುನಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ