ಕ್ರೈಂ ವಾರ್ತೆ

ಮಚ್ಚಿನ ಪತಿ- ಪತ್ನಿ ಒಂದು ದಿನ ಅಂತರದಲ್ಲಿ ಆತ್ಮಹತ್ಯೆ

ಮಚ್ಚಿನ: ಪತ್ನಿ ಆತ್ಮಹತ್ಯೆ ಮಾಡಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆಂದು ಕಟ್ಟಿದ್ದ ಶಾಮಿಯಾನದ ಪೈಪಿಗೆ ಪತಿ ನೇಣು ಹಾಕಿಕೊಂಡು ತಾನೂ ಆತ್ಮಹತ್ಯೆ ಮಾಡಿದ ಘಟನೆ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ.
ಪತ್ನಿ ಚಂದ್ರಾವತಿ (49.ವ) ಅವರು ಹುಲ್ಲು ತರಲೆಂದು ಮನೆಯಿಂದ ಹೊರಗೆ ಹೋದವರು ಪಕ್ಕದ ಗೇರುಮರಕ್ಕೆ ನೆಣುಹಾಕಿಕೊಂಡು ಜು.17,ರಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮರುದಿನ ಅವರ ಪತಿ ಶಿವಪ್ಪ ಮೂಲ್ಯ(56ವ.) ಪತ್ನಿಯ ಶವ ಸಂಸ್ಕಾರಕ್ಕಾಗಿ ಹಾಕಲಾಗಿದ್ದ ಶಾಮೀಯಾದ ಕಂಬಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು.ಪತಿಗೆ ವಾಸಿಯಾಗದ ದೀರ್ಘ ಕಾಲದ ಅಸೌಖ್ಯ ಮತ್ತು ಮಕ್ಕಳಾಗದೇ ಇರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಪೆ ಹೊಂದಿ ಈ ಕೃತ್ಯ ಎಸಗಿದರೆನ್ನಲಾಗಿದೆ.
: ದಂಪತಿಯು ಮುಡಿಪಿರೆ ಎಂಬಲ್ಲಿ ತಾಯಿ
ನಾಗಮ್ಮರೊಂದಿಗೆ ವಾಸ್ತವ್ಯವಿದ್ದರು. ಇದೀಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ತಾಯಿ ಒಬ್ಬಂಟಿಯಾಗಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನಿನ ಪ್ರಕ್ರೀಯೆ ನಡೆದಿದೆ.

ನಿಮ್ಮದೊಂದು ಉತ್ತರ