ಕ್ರೈಂ ವಾರ್ತೆ

ತೋಡಿನ ನೀರಿಗೆ ಅಕ್ರಮ ವಿದ್ಯುತ್ ಸಂಪರ್ಕ ಆರೋಪಿ ಬಂಧನ

ಬೆಳ್ತಂಗಡಿ:  ತೋಡಿನ ನೀರಿಗೆ  ಪಂಪು ಶೆಡ್ಡಿನಿಂದ ಕೇಬಲ್ ಮೂಲಕ ಅನಧಿಕೃತವಾಗಿ ವಿದ್ಯುತ್‌ ಹರಿಸಿದ  ಆರೋಪದಲ್ಲಿ   ವ್ಯಕ್ತಿಯೋವ೯ನನ್ನು      ಪೊಲೀಸರು ಜು.16 ರಂದು ಬಂಧಿಸಿರುವುದಾಗಿ ವರದಿಯಾಗಿದೆ.
ಬಡಗಕಾರಂದೂರು ಗ್ರಾಮದ ಸವೇರಾ ಪಿರೇರಾ ಬಂಧಿತ ಆರೋಪಿಯಾಗಿದ್ದು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಲಯ ಆರೋಪಿ ಗೆ ನ್ಯಾಯಾಂಗ ಬಂಧನ ವಿಧಸಿದೆ.
ಘಟನೆ ವಿವರ: ಕಳೆದ ಜೂ.13 ರಂದು ರಾತ್ರಿ 8.30 ಗಂಟೆ ಸಮಯಕ್ಕೆ ಜಾನ್ ಡಿಸೋಜಾ ಎಂಬವರು ಬಡಗಕಾರಂದೂರು ಗ್ರಾಮದ ಅಳದಂಗಡಿ ಎಂಬಲ್ಲಿರುವ ನಮನ ಡಾಬದ ಸಮೀಪದಲ್ಲಿರುವ ನೀರಿನ ತೋಡಿಗೆ ಮೀನು ಹಿಡಿಯಲು ಹೋದಾಗ ಅವರಿಗೆ ಕರೆಂಟ್‌ ಪ್ರವಹಿಸುವ ಅನುಭವ ಅಗಿದ್ದು ಮರುದಿನ ಜೂ.14ರಂದು ಜಾನ್ ಡಿಸೋಜಾ ಮತ್ತು ಲೈನ್‌ ಮ್ಯಾನ್ ಇತರರೊಂದಿಗೆ ಸದ್ರಿ ತೋಡಿನ ಬಳಿ ತೆರಳಿ ಪರಿಶಿಲಿಸಿದಾಗ ಆರೋಪಿತ ಸವೇರಾ ಪಿರೇರಾ ಎಂಬವರಿಗೆ ಸೇರಿದ ಪಂಪು ಶೆಡ್ಡಿನಿಂದ ಅನದಿಕೃತವಾಗಿ ವಿದ್ಯುತ್‌ ಹರಿಸಿರುವುದು ಪತ್ತೆ ಯಾಗಿತ್ತು. ತನಿಖೆ ನಡೆಸಿದಾಗ ಆರೋಪಿತನು
ಪಂಪ್‌ ಶೆಡ್‌ ಸ್ಥಾವರದಿಂದ ಕೇಬಲ್‌ ವಯರ್‌ ಮುಖಾಂತರ ಅನಧಿಕೃತವಾಗಿ ಶೆಡ್ಡಿನ ಪಕ್ಕದಲ್ಲಿರುವ ನೀರು ಹರಿಯುವ ತೋಡಿಗೆ ಅಡ್ಡಲಾಗಿ ಎರಡು ತಂತಿಯನ್ನು ಕಟ್ಟಿ ಅಪಾಯಕಾರಿಯಾಗುವಂತೆ ಅದಕ್ಕೆ ವಿದ್ಯುತ್‌ ಹಾಯಿಸಿ ಜನರ ಹಾಗೂ ಇತರ ಪ್ರಾಣಿಗಳ ಜೀವಕ್ಕೆ ಹಾನಿಯಾಗುವಂತೆ ಅಪರಾಧ ಎಸಗಿದರೆಂದು ಆರೋಪಿ ಸಲಾಗಿತ್ತು
ಕಾನೂನು ಬಾಹಿರವಾಗಿ ಪಂಪ್‌ ಶೆಡ್ಡಿನಿಂದ ತೋಡಿನ ನೀರಿಗೆ ವಿದ್ಯುತ್‌ ಪ್ರವಹಿಸುವಂತೆ ಮಾಡಿ ಜನರ ಜೀವಕ್ಕೆ ಹಾನಿಯಾಗುವಂತೆ ಮಾಡಿದ ಬಗ್ಗೆ ವೇಣೂರು ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡು ಆರೋಪಿಯನ್ನು ಬಂಧಿಸಿ ದ್ದಾರೆ

ನಿಮ್ಮದೊಂದು ಉತ್ತರ