ಬೆಳ್ತಂಗಡಿ : ಪದವಿ ತರಗತಿಯವಿದ್ಯಾರ್ಥಿಯೊಬ್ಬ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೊಕ್ರಾಡಿ ಗ್ರಾಮದಲ್ಲಿ ಜು.13ರಂದು ನಡೆದಿದೆ.
ಕೊಕ್ರಾಡಿ ಗ್ರಾಮದ ಆರೋದ್ದು ಮನೆ ರತ್ನಾಕರ ಎಂಬವರ ಪುತ್ರ ಉಜಿರೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ರಕ್ಷಿತ್ ಆತ್ಮಹತ್ಯೆ ಮಾಡಿಕೊಂಡ ವರು.
ಅನ್ ಲೈನ್ ತರಗತಿಗಾಗಿ ತನ್ನ ಮನೆಯ ಕೋಣೆಯಲ್ಲಿದ್ದು, ಮನೆಯವರೆಲ್ಲ ಮನೆಕೆಲಸದಲ್ಲಿ ತೊಡಗಿಕೊಂಡಿದ್ದರು. ಮಧ್ಯಾಹ್ನ ಸುಮಾರು 1 ಗಂಟೆ ಹೊತ್ತಿಗೆ ತಾಯಿ ಹೋಗಿ ಕೋಣೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಇಲ್ಲದಾಗ, ಮೊಬೈಲ್ ಗೆ ಕಾಲ್ ಮಾಡಿದ್ದಾರೆ. ಆದರೆ ಮೊಬೈಲ್ ಸ್ವಿಚ್ ಅಫ್ ಆಗಿದ್ದನ್ನು ಗಮನಿಸಿ, ತಕ್ಷಣ ಕಿಟಕಿಯ ಬಾಗಿಲನ್ನು ಒಡೆದು ನೋಡಿದಾಗ ನೇಣು ಬಿಗಿದುಕೊಂ
ಡಿರುವುದು ಕಂಡು ಬಂದಿದೆ. ಕೂಡಲೇ ನಾರಾವಿ ಆಸ್ಪತ್ರೆಗೆ ಕರೆದೊಯ್ದ ಬಳಿಕ ಬೆಳ್ತಂಗಡಿ ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದನ್ನು ಧೃಡಪಡಿಸಿದ್ದಾರೆ.
ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂ
ಡಿರುವ ಸಾಧ್ಯತೆಯಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.