ಕ್ರೈಂ ವಾರ್ತೆ

ಉಜಿರೆಯಿಂದ ಚಿಕ್ಕಮಗಳೂರಿಗೆ ಅಕ್ರಮ ಗಾಂಜಾ ಸಾಗಾಟ ಇಬ್ಬರ ಬಂಧನ

ಬೆಳ್ತಂಗಡಿ: ಉಜಿರೆಯಿಂದ ಚಿಕ್ಕಮಗಳೂರಿಗೆ ಅಕ್ರಮವಾಗಿ ಬೈಕ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಣಕಲ್ ಪೊಲೀಸರು ಬಂಧಿಸಿ
ಆರೋಪಿಗಳಿಂದ ಅರ್ಧ ಕೆ.ಜಿ.ಗಾಂಜಾ ಮತ್ತು ಬೈಕ್ ವಶಪಡಿಸಿಕೊಂಡ ಘಟನೆ ಜೂ.೨೦ರಂದು ರಾತ್ರಿ ಸಂಭವಿಸಿದೆ.
ಚಿಕ್ಕಮಗಳೂರು ಬ್ಯಾಗದ ಹಳ್ಳಿ ನಿವಾಸಿ ರಾಹುಲ್(17ವ) ಹಾಗೂ ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಇಮ್ರಾನ್ ಖಾನ್(32ವ) ವರ್ಷ,ಗೌರಿ ಕಾಲುವೆ ಬಂಧಿತರಾದವರು. ಇವರು ಉಜಿರೆಯಿಂದ ಚಿಕ್ಕಮಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದು, ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ