ಕುವೆಟ್ಟು ಅಂಡೇಲು ಶ್ರೀಮತಿ ಅಪ್ಪಿ ನಿಧನ
ಕುವೆಟ್ಟು: ಕುವೆಟ್ಟು ಗ್ರಾಮದ ಅಂಡೇಲು ಮನೆ ನಿವಾಸಿ ದಿ| ರುಕ್ಮಯ ನಾಯ್ಕರವರ ಧರ್ಮಪತ್ನಿ ಶ್ರೀಮತಿ ಅಪ್ಪಿ (94ವ) ಅವರು ಮೇ 18ರಂದು ಸ್ವಗೃಹದಲ್ಲಿ ನಿಧನರಾದರು.
ಇವರು 2002ರಿಂದ 2006ರವರೆಗೆ ಗುರುವಾಯನಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ನಾಲ್ಕು ಮಂದಿ ಗಂಡು ಹಾಗೂ ನಾಲ್ಕು ಮಂದಿ ಹೆಣ್ಣು ಮಕ್ಕಳು ಬಂಧು-ವರ್ಗದವರನ್ನು ಆಗಲಿದ್ದಾರೆ. ಮೃತರ ಮನೆಗೆ ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್, ಗ್ರಾ.ಪಂ ಮಾಜಿ ಸದಸ್ಯ ಪುರಂದರ ಶೆಟ್ಟಿ ಮತ್ತಿತರ ಗಣ್ಯರು ಆಗಮಿಸಿ ಸಂತಾಪ ವ್ಯಕ್ತಪಡಿಸಿದರು.