ಕ್ರೈಂ ವಾರ್ತೆ

ನಾವೂರಿನ ವಕೀಲರಾದ ರಮೇಶ್ ಮೂಲ್ಯ ಕೋರೊನಾಗೆ ಬಲಿ

ನಾವೂರು: ಇಲ್ಲಿಯ ಇಂಚರ ಮನೆ ನಿವಾಸಿ ನೇಮಣ್ಣ ಮೂಲ್ಯರ ಪುತ್ರ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ರಮೇಶ್ ಪಿ.ಎನ್ ಅವರು ಮೇ. 17ರಂದು ಕೊರೊನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಕೊರೊನಾ ಸೋಂಕು ತಗಲಿತ್ತು. ಬೆಂಗಳೂರಿನಲ್ಲಿ ಟೆಸ್ಟ್ ಮಾಡಿಸಿದಾಗ ಇದು ದೃಢಪಟ್ಟಿತ್ತು. ಅವರು ಊರಿಗೆ ಬಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ 17ರಂದು ಮೃತಪಟ್ಟರೆನ್ನಲಾಗಿದೆ.
ಮೃತರು ಪತ್ನಿ, ಎರಡು ಗಂಡು ಮಕ್ಕಳು ಹಾಗೂ ಬಂಧು, ವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ