ಕೊಕ್ಕಡ: ಕೊಕ್ಕಡದಲ್ಲಿ ನವೀಕರಣಗೊಂಡು ಮಾ.19ರಂದು ಉದ್ಘಾಟನೆಗೊಂಡ ಮಸೀದಿಯ ಕಾರ್ಯಕ್ರಮಕ್ಕೆ ಕೊಕ್ಕಡ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆದುಕೊಂಡು ಹೋಗಿದ್ದು, ಇದೀಗ ಮಸೀದಿ ಉದ್ಘಾಟನೆಗೆ ಹಿಂದೂ ವಿದ್ಯಾರ್ಥಿನಿಯನ್ನು ಕರೆದುಕೊಂಡ ಹೋದ ಬಗ್ಗೆ ವಿವಾದ ಉಂಟಾಗಿದ್ದು, ಸಾಮಾನಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಕ್ಕಡದ ಮಸೀದಿಯ ಉದ್ಘಾಟನೆಗೆ ಶಾಲೆಗೆ ಆಮಂತ್ರಣ ನೀಡಲಾಗಿತ್ತೆನ್ನಲಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರು ಉದ್ಘಾಟನೆಗೆ ಶಾಲಾ ವಿದ್ಯಾರ್ಥಿಗಳುನ್ನು ಕರೆದುಕೊಂಡು ಹೋಗಿದ್ದರೆನ್ನಲಾಗಿದೆ. ಅಲ್ಲಿ ಮಸೀದಿ ಎದುರು ವಿದ್ಯಾರ್ಥಿಗಳನ್ನು ನಿಲ್ಲಿಸಿ ಪೊಟೋ ತೆಗೆದು ಅದನ್ನು ಈಗ ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಶಾಲಾಭಿವೃದ್ಧಿ ಸಮಿತಿ ಮತ್ತು ಪೋಷಕರ ಅನುಮತಿ ಇಲ್ಲದೆ ಹಿಂದೂ ವಿದ್ಯಾರ್ಥಿನಿಯರನ್ನು ಮಸೀದಿ ಉದ್ಘಾಟನೆಗೆ ಕರೆದುಕೊಂಡು ಹೋಗಿರುವುದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.