ಸಾಧಕರು

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಯ ಮುಖ್ಯ ಶಿಕ್ಷಕ ಮೋನಪ್ಪ ಕೆ. ನಿವೃತ್ತಿ

ಪುಂಜಾಲ್ಕಟ್ಟೆಯಲ್ಲಿ ಪದವೀಧರ ಮುಖ್ಯ ಶಿಕ್ಷಕರಾಗಿ 10 ವರ್ಷ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮೋನಪ್ಪ ಕೆ. ಅವರು ಮೇ.31ರಂದು ಸರಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ.
ಬಂಟ್ವಾಳ ಪೆರುವಾಯಿ ಕೆದುಮೂಲೆ ನಿವಾಸಿ ಯಾಗಿರುವ ಮೋನಪ್ಪ ಕೆ. ಅವರು ಹಿ.ಪ್ರಾ ಶಾಲೆ ಕೊಳ್ಳತಡ್ಕದಲ್ಲಿ ಪ್ರಾಥಮಿಕ ದೀಪಿಕಾ ಮೊಡಂಕಾಪುನಲ್ಲಿ ಪ್ರೌಢ, ಸ.ಪ.ಪೂ.ಕಾಲೇಜು ಪುತ್ತೂರುನಲ್ಲಿ ಪಿ.ಯು ಶಿಕ್ಷಣ ಪಡೆದು ಮಂಗಳೂರಿನಲ್ಲಿ ಟಿಸಿಎಚ್ ತರಬೇತಿ ಪಡೆದಿದ್ದರು. ಬಳಿಕ ಕರ್ನಾಟಕ ಮುಕ್ತ ವಿ.ವಿ. ಮೈಸೂರಿನಿಂದ ಪದವಿ ಮತ್ತು ಸ್ನಾತಕೊಡಿತ್ತರ ಪದವಿ ಪಡೆದ್ದಾರೆ. ಜೊತೆಗೆ ಮಡಿಕೇರಿಯಲ್ಲಿ ಸಹಕಾರಿ ತರಬೇತಿಯನ್ನೂ ಕೂಡಾ ಪಡೆದಿದ್ದಾರೆ.
1988 ರಲ್ಲಿ ಚೆನ್ನೆತ್ತೋಡಿ ಮಾ.ಹಿ.ಪ್ರಾ ಶಾಲಾ ಶಿಕ್ಷಕರಾಗಿ ಸರಕಾರಿ ಸೇವೆಗೆ ಸೇರ್‍ಪಡೆಗೊಂಡ ಅವರು 34 ವರ್ಷಗಳ ಸೇವೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆದಿಲ ಕ್ಲಸ್ಟರ್‌ನಲ್ಲಿ 1 ವರ್ಷ ಸೇವೆ ಸಲ್ಲಿಸಿದ್ದರು. ನಂತರ 2002ರಲ್ಲಿ ಸ.ಹಿ.ಪ್ರಾ ಶಾಲೆ ಪಾಂಡವರಕಲ್ಲಿಗೆ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡು ಅಲ್ಲಿಯ ಬೆಳವಣಿಗೆಗೆ ಕಾಣಿಭೂತರಾದರು. 2013ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಗೆ ಪದವೀಧರೇತರ ಮುಖ್ಯ ಶಿಕ್ಷಕರ ಭಡ್ತಿ ಹೊಂದಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶಾಲೆಯ ಸಮಗ್ರ ಅಭಿವೃದ್ದಿಗಾಗಿ ದುಡಿದಿರುವ ಇವರ ಅವಧಿಯಲ್ಲಿ ಶಾಲೆಯಲ್ಲಿ ಸಾವಿರಕ್ಕೂ ಮಿಕ್ಕಿ ಮಕ್ಕಳಿದ್ದಾರೆ. ಶಿಕ್ಷಣಕ್ಕೆ ಪೂರಕವಾದ ಆನೇಕ ವ್ಯವಸ್ಥೆಗಳನ್ನು ಇವರು ದಾನಿಗಳ ಮೂಲಕ ಶಾಲೆಗೆ ಮಾಡಿಸಿಕೊಟ್ಟು ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಅಧ್ಯಾಪಕ ಸೇವಾ ಸಹಕಾರಿ ಸಂಘ ವಿಟ್ಲ ಇದರ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿರುವ ಇವರು ಚೆಂಡೆವಾದಕರಾಗಿ ಆನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. 2002ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2004ರಲ್ಲಿ ಬಂಟ್ವಾಳ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2019ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದ್ದಾರೆ. ಇವರು ಧರ್ಮಪತ್ನಿ ಶ್ರೀಮತಿ ಪುಷ್ಪಾ ಶಿಕ್ಷಕರಾಗಿರುವ ಇಬ್ಬರು ಮಕ್ಕಳು ಕವನ್ ಕುಮಾರ್ ಮತ್ತು ಕುಮಾರಿ ಕಾವ್ಯಾ ಇವರೊಂದಿಗೆ ಸಂಪನ್ನ ಜೀವನ ಸಾಗಿಸುತ್ತಿದ್ದಾರೆ.

ನಿಮ್ಮದೊಂದು ಉತ್ತರ