ಬೆಳ್ತಂಗಡಿ: ಫರಂಗಿಪೇಟೆ ಬಳಿ ದುಷ್ಕರ್ಮಿಗಳ ತಂಡ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿರುವ ಘಟನೆಯನ್ನು ವಿರೋಧಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಒತ್ತಾಯಿಸಿ ಬಿ.ಜೆ.ಪಿ ಬೆಳ್ತಂಗಡಿ ಮಂಡಲ, ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಬೆಳ್ತಂಗಡಿ ಮಂಡಲ ಹಾಗೂ ವಿಶ್ವಹಿಂದೂ ಪರಿಷತ್, ಬೆಳ್ತಂಗಡಿ ಪ್ರಖಂಡ, ಭಜರಂಗದಳ ಬೆಳ್ತಂಗಡಿ ಪ್ರಖಂಡ ವತಿಯಿಂದ ಬೆಳ್ತಂಗಡಿ ತಹಶೀಲ್ದಾರ್ ಗೆ ಹಾಗೂ ಬೆಳ್ತಂಗಡಿ ಆರಕ್ಷಕ ಠಾಣಾಧಿಕಾರಿಗಳ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಮನವಿಯನ್ನು ಅ.14ರಂದು ಸಲ್ಲಿಸಲಾಯಿತು.ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ ರಾವ್, ಪ್ರಮುಖರಾದ ಪ್ರಶಾಂತ್ ಪಾರೇಂಕಿ, ಸೀತಾರಾಮ ಬೆಳಾಲು, ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಯಶವಂತ ಗೌಡ ಬೆಳಾಲು, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ ಹಾಗೂ ವಿನುತ್ ಸಾವ್ಯ,ಕೊರಗಪ್ಪ ನಾಯ್ಕಜಯಂತ ಗೌಡ, ದಿನಕರ್ ಕುಲಾಲ್ ತಾಲೂಕು ಪ್ರ. ಕಾರ್ಯದರ್ಶಿ ಮಂಜುನಾಥ್ ಸಾಲ್ಯಾನ್ ಜಿಲ್ಲಾ ಕಾರ್ಯಕಾರಿ ಸದಸ್ಯ ಅಶೋಕ್ ಕಾರ್ಯದರ್ಶಿ ಜಿಲ್ಲಾ ವಿಶ್ವನಾಥ್ ಪೂಜಾರಿ, ವಿವಿಧ ಗ್ರಾಂ.ಪಂ ಅಧ್ಯಕ್ಷರುಗಳು, ಉಪಾಧ್ಯಕ್ಷರು ಗಳು, ಮಾಜಿ ಜಿ.ಪಂ, ತಾ.ಪಂ ಸದಸ್ಯರು, ಪಕ್ಷದ ಕಾರ್ಯಕರ್ತರು, ಹಿಂದುಳಿದ ವರ್ಗ ಮೋರ್ಚಾ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಿ.ಹಿ.ಪ ಭಜರಂಗದಳ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಚಾಲಕ ಭಾಸ್ಕರ್ ಧರ್ಮಸ್ಥಳ , ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಸಂಯೋಜಕರು ಉಪಸ್ಥಿತರಿದ್ದರು.