ಶಿರ್ಲಾಲು: ಶಿರ್ಲಾಲು ಗ್ರಾಮದ ಪುಚ್ಚೆದೊಟ್ಟು ನಿವಾಸಿ ಶಿರ್ಲಾಲು ಗ್ರಾ.ಪಂ ಮಾಜಿ ಅಧ್ಯಕ್ಷ ಪುಷ್ಪರಾಜ್ ಅವರ ಮಾವ, ಸಗುಣ ಅವರು ಅ.2ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಶಿರ್ಲಾಲು ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ಇದರ ಜಾತ್ರ ಸಮಿತಿಯ ಮಾಜಿ ಅಧ್ಯಕ್ಷರಾಗಿ, ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಸದಸ್ಯರಾಗಿ, ತಾಲೂಕು ಬಿ ಜೆ ಪಿ ಪರಿಶಿಷ್ಟ ಜಾತಿ ಮೊರ್ಛಾದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಪ್ರಗತಿಪರ ಕೃಷಿಕರು ಕೂಡಾ ಆಗಿದ್ದರು. ಮೃತರು ಒಬ್ಬ ಪುತ್ರ ಮೂರು ಜನ ಪುತ್ರಿಯರು ಹಾಗೂ ಮೊಮಕ್ಕಳನ್ನು ಅಳಿಯಂದಿರನ್ನು ಬಂಧು-ಮಿತ್ರರನ್ನು ಅಗಲಿದ್ದಾರೆ.