ಅಳದಂಗಡಿ: ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಹಕ ಅಭಿಯಂತರಾಗಿ ಸೇವೆ ಸಲ್ಲಿಸಿ ಇದೀಗ ದಕ್ಷಿಣ ಕನ್ನಡ-ಕೊಡುಗು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಕಾರ್ಯನಿರ್ವಹಕ ಅಭಿಯಂತರಾಗಿ ಪದೋನ್ನತಿ ಹೊಂದಿದ ಶಿವಪ್ರಸಾದ್ ಅಜಿಲ ಅಳದಂಗಡಿ ಇವರಿಗೆ ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ಸಮಾಜ ಬಾಂಧವರ ಪರವಾಗಿ ಸನ್ಮಾನ ಕಾರ್ಯಕ್ರಮ ಸೆ.೧೮ರಂದು ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಜರುಗಿತು.
ಈ ಸಂಧರ್ಭದಲ್ಲಿ ಅಳದಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಸದಾನಂದ ಉಂಗಿಲಬೈಲು, ಉಜಿರೆ ಗ್ರಾಮ ಪಂಚಾಯತ್ ಪಿಡಿಓ ಪ್ರಕಾಶ್ ಶೆಟ್ಟಿ ನೋಚ್ಚ, ನಲಿಕೆಯವರ ಸಮಾಜ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸೇಸಪ್ಪ ನಲಿಕೆ, ಹಿರಿಯರಾದ ವೀರಪ್ಪ ಕೊಯ್ಯುರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣೇಶ್ ಕೋಟ್ಯಾನ್ ಚಾರ್ಮಾಡಿ, ಅನಂತ ಮುಂಡಾಜೆ, ತಿಮ್ಮಪ್ಪ ವೇಣೂರು, ನಾರಾಯಣ ಪಣೆಜಾಲು, ಸಂಜೀವ ರೆಂಕೆದ ಗುತ್ತು, ಹಾಗೂ ನಲಿಕೆ ಸಮಾಜದ ಭಾಂದವರು ಉಪಸ್ಥಿತರಿದ್ದರು