ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಇಂದು ಜೂನಿಯರ್ ರೆಡ್ ಕ್ರಾಸ್ ಉದ್ಘಾಟನಾ ಸಮಾರಂಭ ನೆರವೇರಿತು . ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಹರಿದಾಸರು ದೀಪ ಬೆಳಗಿಸುವುದರ ಮುಖಾಂತರ
ಹಾಗೂ ಜೂನಿಯರ್ ರೆಡ್ ಕ್ರಾಸ್ ನ ಅಧ್ಯಕ್ಷರಾಗಿರುವ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂವಿ ಕಂಪ್ಯೂಟರ್ ಮೌಸ್ ನ ಒಂದು ಕ್ಲಿಕ್ಕಿನಲ್ಲಿ ರಕ್ತದಾನದ ಮಹತ್ವವನ್ನು ಸಾರುವ ಪೋಸ್ಟರನ್ನು ಬಿಡುಗಡೆಗೊಳಿಸುವ ಮುಖಾಂತರ ಉದ್ಘಾಟಿಸಿದರು ನಂತರ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಹರಿದಾಸ ಎಸ್‌ಎಂ.ಅವರು ದಾನದ ಮಹತ್ವ, ಮಾನವೀಯ ಸೇವೆಗಳು, ಭಾರತೀಯ ರೆಡ್ ಕ್ರಾಸ್ ಬಗ್ಗೆ ಮಾಹಿತಿ ಕುರಿತು ಮಾತನಾಡಿದರು. ಜೂನಿಯರ್ ರೆಡ್ ಕ್ರಾಸ್ ಶಾಲೆಗಳಲ್ಲಿ ಏಕೆ ಬೇಕು ಅದರ ಅಗತ್ಯವೇನು
ಎಂಬುದರ ಕುರಿತು ಮಾತನಾಡಿ ದರು. ನಂತರ ಮಾತನಾಡಿದ ಜೂನಿಯರ್ ರೆಡ್ ಕ್ರಾಸ್ ನ ಅಧ್ಯಕ್ಷರಾಗಿರುವ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ,ವಿದ್ಯಾರ್ಥಿಗಳು ದತ್ತಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. ಅಲ್ಲದೆ ರಕ್ತದಾನದ ಮಹತ್ವವನ್ನು ವಿವರಿಸಿದರು. ಭಾರ್ಗವಿ ಸ್ವಾಗತಿಸಿ, ಅಭಿಜ್ಞಾನ್ ವಂದಿಸಿ ಅನಘಾ ಕಾರ್ಯಕ್ರಮ ನಡೆಸಿಕೊಟ್ಟರು. ಅನಿಕಾ, ಹಂಸಿನಿ, ಅನ್ವಿತಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು.