ಗ್ರಾಮಾಂತರ ಸುದ್ದಿ

ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ರೈತರ ಮನೆ ಬಾಗಿಲಿಗೆ : *ಹರೀಶ್ ಕಾರಿಂಜ.*

ನಾವೂರು : ನಾವೂರು ಗ್ರಾಮದ ರೈತ ಬಂಧುಗಳಿಗೆ *ಇಕೋ ಫ್ರೆಶ್ ಎಂಟರ್ ಪ್ರೈಸಸ್* ಬೆಳ್ತಂಗಡಿ ಮತ್ತು *ನವೋದಯ ಯುವಕ ಮಂಡಲ * ನಾವೂರು ಇವರ ಜಂಟಿ ಸಹಬಾಗಿತ್ವದಲ್ಲಿ ಕೃಷಿ ಉಪಕರಣಗಳ ಮಾಹಿತಿ ಹಾಗೂ ಕಾರ್ಬನ್ ಪೈಬರ್ ದೋಟಿಯಲ್ಲಿ ಅಡಿಕೆ ಕೊಯ್ಲು ಮಾಡಲು ಮತ್ತು ಮದ್ದು ಸಿಂಪಡಿಸಲು ಜೂ. 26 ರಂದು ಬೆಳಿಗ್ಗೆ *ಧರ್ಣಪ್ಪ ಮೂಲ್ಯ* ಕಾಯರ್ದಡಿ (ಕಾರಿಂಜ) ಇಲ್ಲಿ ತರಬೇತಿ.

ಸಭೆಯ ಅಧ್ಯಕ್ಷತೆಯನ್ನು ನವೋದಯ ಯುವಕ ಮಂಡಲದ ಅಧ್ಯಕ್ಷರಾದ * ಹರೀಶ್ ಕಾರಿಂಜ* ವಹಿಸಿ, ಇವತ್ತು ಬೆಳ್ತಂಗಡಿಯ ಮುಂಚೂಣಿ ಕೃಷಿ ಉಪಕರಣ ಮಾರಾಟ ಸಂಸ್ಥೆಯಾದ ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಇವರು ಕೃಷಿ ಮನೆ ಬಾಗಿಲಿಗೆ ಬಂದು ತರಬೇತಿ ನೀಡಿದ್ದು ಗ್ರಾಮದ ಇತಿಹಾಸದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರಾದ * ಗಣೇಶ್ ಗೌಡ* ನೆಲ್ಲಿಪಲ್ಕೆ ಕಾರ್ಯಕ್ರಮವನ್ನು ಬೆಳಗಿಸುವ ಮೂಲಕ ದೀಪಾಲಂಕಾರ ಮಾಡಿ, ಆಧುನಿಕ ಯಂತ್ರೋಪಕರಣವನ್ನು ರೈತರು ಕೃಷಿಯಲ್ಲಿ ಸ್ವಾವಲಂಬನೆ ಪಡೆದುಕೊಳ್ಳಬೇಕೆಂದರು. ಮುಖ್ಯ ಅತಿಥಿಯಾಗಿ ಬಂಗಾಡಿ ಸಿ ಬ್ಯಾಂಕ್ ನ ಅಧ್ಯಕ್ಷರಾದ ಹರೀಶ್ ಸಾಲ್ಯಾನ್* ಮೋರ್ತಾಜೆಯವರು ಮಾತನಾಡುತ್ತ ಕೃಷಿಗೆ ಸಂಭಂದಿಸಿದ ಉಪಕರಣವನ್ನು ಖರೀದಿಸಲು ರೈತರಿಗೆ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ನೀಡಿದರು. ವೇದಿಕೆಯಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರೂ, ಪ್ರಗತಿಪರ ಕೃಷಿಕರಾದ * ಗಣೇಶ್ ಕನಾಲ್* ಮತ್ತು *ಲ | ಧರ್ಣಪ್ಪ ಮೌಲ್ಯ*. ಇಕೋ ಫ್ರೆಶ್ ಎಂಟರ್ ಪ್ರೈಸಸ್ ಬೆಳ್ತಂಗಡಿ ಇದರ ಮಾಲಕರಾದ *

ರಾಕೇಶ್ ಹೆಗ್ಡೆಯವರು* ಕೃಷಿಕರಿಗೆ ಮಾಹಿತಿ ತರಬೇತಿ ನೀಡಿದ್ದಾರೆ. ಪ್ರಸ್ತುತ ವರ್ಷದ ಕೃಷಿ ಇಲಾಖೆಯಿಂದ ಸುಮಾರು 25.00 ಲಕ್ಷಕ್ಕೂ ಮಿಕ್ಕಿದ ಸಬ್ಸಿಡಿ ಸೌಲಭ್ಯವನ್ನು ಕೃಷಿಕರಿಗೆ ಒದಗಿಸಿದ *ರಾಕೇಶ್ ಹೆಗ್ಡೆ* ಇವರನ್ನು ನವೋದಯ ಯುವಕ ಮಂಡಲದ ಅಧ್ಯಕ್ಷರಾದ ಹರೀಶ್ ಕಾರಿಂಜ ಇವರ ಸಲಹೆಯಂತೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯುವ ತಂತ್ರಜ್ಞ * ಸತೀಶ್ ಕುಲಾಲ್* ಬಾಳ್ತಾರ ಹಾಗೂ * ನಾಗೇಶ್* ಓಂ ನಿವಾಸ ಸಹಕರಿಸಿದರು. *ಇವರು ಕಿರಣ್ ಪ್ರಭು ಯು* ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ.

ನಿಮ್ಮದೊಂದು ಉತ್ತರ