ಕ್ರೈಂ ವಾರ್ತೆ

8ನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌಜ೯ನ್ಯ : ತಲೆಮರೆಸಿ ಕೊಂಡಿದ್ದ ಆರೋಪಿ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್ ಮೈಸೂರಿನಲ್ಲಿ ಬಂಧನ

ಬೆಳ್ತಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಬಣ ಎಂಬಲ್ಲಿ 8ನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌಜ೯ನ್ಯ ನಡೆಸಿ ಪೋಕ್ಸೋ ಕಾಯ್ದೆಯ ಬಳಿಕ ತಲೆಮರೆಸಿ ಕೊಂಡಿದ್ದ ಆರೋಪಿ ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್ (21ವ)
ಎಂಬಾತನನ್ನು ಪೊಲೀಸರು ಮೈಸೂರಿನಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯವು ಸದ್ರಿ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಘಟನೆ ವಿವರ: ಅಪ್ರಾಪ್ತ 13 ವರ್ಷದ ಬಾಲಕಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆರೋಪಿ ಮುನಾಸಿರ್ ಬಾಲಕಿಯ ನೆರೆಕರೆಯವನಾಗಿದ್ದು, ಆಗಾಗ ಆಕೆಯ ಮನೆಗೆ ಬಂದು ಹೊಗುತ್ತಿದ್ದನು. ಒಂದು ದಿನ ಆತ ಮನೆಗೆ ಬಂದು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿ, ಬೇಡ ಎಂದರೂ. ಪದೇ ಪದೇ ಒತ್ತಾಯ ಮಾಡಿ, ಮೇ 30 ರಂದು ಬೆಳಿಗೆ ಆಕೆ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಬಳಿ ತಲುಪಿದಾಗ, ಮುನಾಸಿರ್ ಕಾರಲ್ಲಿ ಬಂದು ನಿನ್ನನ್ನು ‌ಶಾಲೆಗೆ ಬಿಡುತ್ತೇನೆ ನೀನು ಬಾ ಎಂದು ಕೈ ಹಿಡಿದು ಕರೆದುಕೊಂಡು ಹೋಗಿ ಶಾಲೆಗೆ ಬಿಡದೇ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಆರೋಪಿ ಸಲಾಗಿತ್ತು.
‌        ಅಲ್ಲದೆ ಜೂ. 7 ರಂದು ಬಾಲಕಿ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಹತ್ತಿರ ತಲುಪಿದಾಗ ಆರೋಪಿ ಮುನಾಸಿರ್ ಮತ್ತೆ ಬಂದು ಆಕೆಯನ್ನು ಬಲತ್ಕಾರವಾಗಿ ಕೈ ಹಿಡಿದು ಎಳೆದು ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿಯ ಲಾಡ್ಜ್ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌಜ೯ನ್ಯ ನಡೆಸಿ, ಈ ವಿಷಯವನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿ ಸಲಾಗಿತ್ತು.
ಬಾಲಕಿ ನೀಡಿದ ದೂರಿನಂತೆ ಆರೋಪಿಯ ವಿರುದ್ಧ
ಉಪ್ಪಿನಂಗಡಿಯಲ್ಲಿ ಠಾಣೆಯಲ್ಲಿ ಅ.ಕ್ರ 71-2022 ಕಲಂ:363,376, (2) (ಎಫ್) (ಎನ್), 506 IPC ಮತ್ತು ಕಲಂ:5 (ಎಲ್),6 ಪೋಕ್ಸೋ ಕಾಯ್ದೆಯಂತೆ ಕೇಸು ದಾಖಲಾಗಿತ್ತು.

ನಿಮ್ಮದೊಂದು ಉತ್ತರ