ನೆರಿಯ: ಇಲ್ಲಿಯ ಗಂಡಿಬಾಗಿಲು ಸಮೀಪದ ಕೋಡಿ ನಿವಾಸಿ ಕೃಷಿಕ ಗೋಪಾಲ ಕೃಷ್ಣ ಗೌಡ (47ವ) ಎಂಬವರು ರಬ್ಬರ್ಗೆ ಬಳಸುವ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 13ರಂದು ರಾತ್ರಿ ನಡೆದಿದೆ.
ರಬ್ಬರ್ ಕೃಷಿಯನ್ನು ಹೊಂದಿರುವ ಇವರು ರಬ್ಬರ್ ಶೀಟ್ ಮಾಡಲು ಬಳಸುವ ಆಸಿಡ್ನ್ನು ಸೇವಿಸಿ ಈ ಕೃತ್ಯವನ್ನು ಎಸಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಸಾಲಬಾಧೆಯಿಂದ ಅವರು ಈ ಕೃತ್ಯವನ್ನು ಮಾಡಿಕೊಂಡಿದ್ದಾರೆ ಎಂಬ ವದಂತಿ ಊರಿನಲ್ಲಿ ಹರಡಿದೆ. ಆಸಿಡ್ ಸೇವಿಸಿದ್ದ ಇವರನ್ನು ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರುವ ದಾರಿ ಮಧ್ಯೆ ಅವರು ಸಾವನ್ನಪ್ಪಿದರೆಂದು ವರದಿಯಾಗಿದೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ ರತ್ನಾವತಿ, ಪುತ್ರ ಶೃಜನ್, ಪುತ್ರಿ ಸುಪ್ರೀತಾ, ನಾಲ್ವರು ಸಹೋದರರನ್ನು ಅಗಲಿದ್ದಾರೆ.