ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ನೃತ್ಯಗುರು ಪಿ. ಕಮಲಾಕ್ಷ ಆಚಾರ್‌ರವರಿಗೆ ಅಭಿನಂದನೆ – ಕಲಾ ಕ್ಷೇತ್ರಕ್ಕೆ ಕಮಲಾಕ್ಷ ಆಚಾರ್ ಅವರ ಕೊಡುಗೆ ಅನನ್ಯ: ಡಾ.ಮೋಹನ್ ಆಳ್ವಾ

ಉಜಿರೆ: ಕಮಲಾಕ್ಷ ಆಚಾರ್ ಅಭಿನಂದನಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಸರಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2021-22ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ
ನೃತ್ಯಗುರು ಪಿ. ಕಮಲಾಕ್ಷ ಆಚಾರ್‌
ಅವರಿಗೆ ಅಭಿನಂದನಾ ಕಾಯ೯ಕ್ರಮ ಮಾ. 27 ಭಾನುವಾರ ಅಪರಾಹ್ನ ಉಜಿರೆಯ ಶಾರದಾ ಕಲಾಮಂಟಪದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಡಬಿದ್ರೆ ಇದರ ಅಧ್ಯಕ್ಷ ಡಾ| ಎಮ್. ಮೋಹನ್ ಆಳ್ವ ವಹಿಸಿ, ಶಿಕ್ಷಣದ ಜೊತೆಗೆ ಭರತ ನೃತ್ಯವನ್ನು ಕಲಿಸಿ ಸಾವಿರರಾರು ಶಿಷ್ಯ ವೃಂದವನ್ನು ಹೊಂದಿರುವ ಕಮಲಾಕ್ಷ ಆಚಾರ್ ಅವರು ಕಲಾ ಕ್ಷೇತ್ರಕ್ಕೆ ನೀಡಿದ ಸೇವೆ ಅವರ ವಿಶೇಷ ಕೊಡುಗೆ ಯಾಗಿದೆ ಎಂದರು. ಕಳೆದ ಎರಡು ವಷಾ೯ವಧಿಯ ಸಂಕಷ್ಟ ದ ನಡುವೆಯೂ ಭರತ ನಾಟ್ಯದಲ್ಲಿ ಏಳು ಸಾವಿರ ಮಕ್ಕಳು ರಾಜ್ಯದಲ್ಲಿ ಪರೀಕ್ಷೆ ಬರೆದ್ದಾರೆ ಎಂದರೆ ಇದಕ್ಕೆ ಕಮಲಾಕ್ಷ ಆಚಾರ್ ಅವರಂತಹ ನಾಟ್ಯ ಗುರುಗಳು ಕಾರಣ ಎಂದರು. ಭರತ ನೃತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಕಮಲಾಕ್ಷ ಆಚಾರ್ ರವರಿಗೆ ರಾಜ್ಯ ಪ್ರಶಸ್ತಿ ದೊರೆಯಲಿ ಎಂದು ಹಾರೈಸಿದರು.


ಅಭ್ಯಾಗತರಾಗಿ ಭಾಗವಹಿಸಿದ್ದ
ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, 47 ವಷ೯ ನೃತ್ಯ ಕಲಾ ಸೇವೆ ಮಾಡಿದ ಕಮಲಾಕ್ಷ ಆಚಾರ್ ಅವರು ಸಮಾಜಕ್ಕಾಗಿ ತನ್ನ ಸೇವೆಯನ್ನು ಸಮಪಿ೯ಸಿ ರಾಷ್ಟ್ರಕ್ಕಾಗಿ ಬದುಕಿದವರು ಎಂದರು.
ಸಂಸ್ಕಾರ ಭಾರತಿ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಶುಭ ಕೋರಿದರು.
ವಿಶ್ರಾಂತ ಉಪನ್ಯಾಸಕ ಮಧುಕರ ಮಲ್ಯ
ಅಭಿನಂದನಾ ಭಾಷಣ  ಮಾಡಿ, ಕಮಲಾಕ್ಷ ಆಚಾರ್ ಅವರ ಕಲಾವ ಸೇವೆ, ವಿದ್ವತ್, ಅವರ ಸಾಧನೆಗಳ ಬಗ್ಗೆ ತಿಳಿಸಿದರು.
ಡಾ| ಕೃಪಾ ಫಡ್ಕೆ ಮೈಸೂರು, ಡಾ| ರಜತಾ ಪಿ.ಶೆಟ್ಟಿ ಉಜಿರೆ ಗುರುನಮನ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿದ ಕಮಲಾಕ್ಷ ಆಚಾರ್ ಅವರು ತನ್ನ ಕಲಾ ಬದುಕಿನ ಬಗ್ಗೆ ಹಾಗೂ ಸಹಕಾರ ನೀಡಿದವರನ್ನು, ತನ್ನ ಶಿಷ್ಯವೃಂದದವರನ್ನು ನೆನಪಿಸಿಕೊಂಡು ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಬಿ. ವಿಠಲ ಶೆಟ್ಟಿ ಸ್ವಾಗತಿಸಿದರು. ಯದುಪತಿ ಗೌಡ ಸಂದೇಶ ವಾಚಿಸಿದರು. ಸೋಮಶೇಖರ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಶಿವರಾಮ ಶಿಶಿಲ ಕಮಲಾಕ್ಷ ಆಚಾರ್ ಬಗ್ಗೆ ಕವನ ವಾಚನ ಮಾಡಿದರು.
ಉಪಾಧ್ಯಕ್ಷ ಗಣಪತಿ ಭಟ್ ಕುಳಮರ್ವ ಕಾಯ೯ಕ್ರಮ ನಿರೂಪಿಸಿದರು.


ಉಪಾಧ್ಯಕ್ಷರುಗಳಾದ ಸುಬ್ರಹ್ಮಣ್ಯ ಕುಮಾರ ಪಿ., ಪೃಥ್ವಿರಂಜನ್ ರಾವ್,ಕೋಶಾಧಿಕಾರಿ
ಕೃಷ್ಣಪ್ಪ ಪೂಜಾರಿ,ಬಿ. ಗೋಪಾಲ ರಾವ್, ಹೇಮಂತ ರಾವ್, ಜತೆ ಕಾರ್ಯದರ್ಶಿ ರುಕ್ಮಯ ಆಚಾರ್ಯ ಕನ್ನಾಜೆ ಸಹಕಾರ ನೀಡಿದರು.
ಕಾರ್ಯದರ್ಶಿ ಪುರುಷೋತ್ತಮ ಕೆ.ಎ. ಧನ್ಯವಾದವಿತ್ತರು. ಅಭಿನಂದನಾ ಸಮಿತಿ ಪದಾಧಿಕಾರಿಗಳು., ಶಿಷ್ಯವೃಂದದವರು, ನಾಗರಿಕರು ಉಪಸ್ಥಿತಿ ಇದ್ದರು.


ಆರಂಭದಲ್ಲಿ
ಡಾ|| ವಿದುಷಿ ಕೃಪಾಪಡ್ಕೆ ನಿರ್ದೇಶಕರು ನೃತ್ಯಗಿರಿ ಮೈಸೂರು ತಂಡದವರಿಂದ ಭರತ ನೃತ್ಯಾಂಜಲಿ ವಿಶೇಷ ಆಕರ್ಷಣೆಯಿಯಿತು.

ನಿಮ್ಮದೊಂದು ಉತ್ತರ