ಕ್ರೈಂ ವಾರ್ತೆ

ಮೇಲಂತಬೆಟ್ಟು: ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಇಬ್ಬರ ಮೇಲೆ ಪೋಕ್ಷೋ ಕೇಸ್ ದಾಖಲು

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ನಿವಾಸಿ
ವಿದ್ಯಾರ್ಥಿನಿಯೋವ೯ಳಮೇಲೆ ಬಲತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಯುವತಿ ನೀಡಿದ ದೂರಿನ ಆಧಾರದ ಮೇಲೆ ಇಬ್ಬರ ಮೇಲೆಸೆ.29 ರಂದು ಬೆಳ್ತಂಗಡಿ ಪೋಲೀಸ್ ರು ಪೋಕ್ಷೋ ಕಾಯ್ದೆಯ
ನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಮೇಲಂತಬೆಟ್ಟು ನಿವಾಸಿ ರವೀಂದ್ರ ಹಾಗೂ ಕೊಕ್ರಾಡಿ ನಿವಾಸಿ ಯೋಗೀಶ್ ಎಂಬವರ ಮೇಲೆ ಈ ಕೇಸನ್ನು ದಾಖಲಿಸಿಕೊಳ್ಳಲಾಗಿದೆ. ಯುವತಿ ನೀಡಿದ ದೂರಿನಲ್ಲಿ ಲಾಕ್‌ ಡೌನ್ ಸಮಯದಲ್ಲಿ ಮನೆಯ ಬಳಿ ಜೆಸಿಬಿ ಚಾಲಕರಾದ ರವೀಂದ್ರ ಎಂಬವರು ಪರಿಚಯವಾಗಿ ಸಲುಗೆಯಿಂದ ಇದ್ದು, ಡಿಸೆಂಬರ್ ತಿಂಗಳ ಮೊದಲ ವಾರ    ಇನ್ನೆರಡು ದಿನಗಳಲ್ಲಿ  ಮನೆ ಹತ್ತಿರದ ನಿಜ೯ನ ಕಾಡುಪ್ರದೇಶದಲ್ಲಿ ನನ್ನ ಮೇಲೆ ಬಲತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ
ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ರವೀಂದ್ರ ತನ್ನ ಮೇಲೆ ಅತ್ಯಾಚಾರ ಎಸಗುವ ಮೊದಲು ಎ.13, 2020 ರಂದು ಬೆಳಿಗ್ಗೆ ಕೊಕ್ರಾಡಿ ಯೋಗೀಶ್ ತನ್ನನ್ನು ಸವಣಾಲು ಗ್ರಾಮದ ಕಾಡುಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.
ಸೆ. 23 ರಂದು ಇಂಜೆಕ್ಷನ್ ಕೊಡಲೆಂದು ಬಂದ ವೈದ್ಯರು ತನ್ನ ದೇಹಸ್ಥಿತಿಯನ್ನು ನೋಡಿ ಆಸ್ಪತ್ರೆಯಲ್ಲಿ ಪರೀಕ್ಷಿಸಲು ತಿಳಿಸಿದಂತೆ ಸೆ.27 ರಂದು ವೈದ್ಯರಲ್ಲಿ ಪರೀಕ್ಷಿಸಿದಾಗ 7 ತಿಂಗಳ ಗರ್ಭಿಣಿಯಾಗಿರುವುದೆಂದು ತಿಳಿಸಿದ್ದು,
ತನ್ನ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ
ಎಸಗಿ ತನ್ನನ್ನು ಗರ್ಭಿಣಿಯನ್ನಾಗಿ ಮಾಡಿದ ರವೀಂದ್ರ ಹಾಗೂ ಯೋಗೀಶ ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ತನಗೆ ನ್ಯಾಯ ಒದಗಿಸಿಕೊಡಬೇಕಾಗಿ ಠಾಣೆಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ಠಾಣೆ ಯಲ್ಲಿ ಇಬ್ಬರು ಮೇಲೂ ಠಾಣಾ ಅ.ಕ್ರ 80/2021 ಕಲಂ: ಕಲಂ: 5,6 ಫೋಕ್ಸೋ ಕಾಯ್ದೆ 2012 & ಕಲಂ:376 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ನಿಮ್ಮದೊಂದು ಉತ್ತರ