ಬೆಳ್ತಂಗಡಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ
ಚಾರ್ಮಾಡಿ ಘಾಟಿ 7ನೇ ತಿರುವಿನ ಬಳಿ ಮಧ್ಯಮ ಗಾತ್ರದ ಬಂಡೆ ಕುಸಿತಕ್ಕೊಳಗಾಗಿದೆ.
ಇದರಿಂದ ಘಾಟಿಪ್ರದೇಶದಲ್ಲಿ ಏಕಮುಖ ಸಂಚಾರಕ್ಕೆ ಯಾವುದೇ
ಅಡ್ಡಿ ಇಲ್ಲ ಎಂದು ತಿಳಿದು ಬಂದಿದೆ.
ಮಂಜಿನ ವಾತಾವರಣ ಇರುವುದರಿಂದ ತಕ್ಷಣ ತೆರವು ಅಗತ್ಯವಿದ್ದು,
ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.