ಕ್ರೈಂ ವಾರ್ತೆ

ಕುಕ್ಕೇಡಿಯಲ್ಲಿ ಬಾವಿಗೆ ಬಿದ್ದು ಯುವತಿ ಸಾವು

ವೇಣೂರು: ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ನಿವಾಸಿ ಬಶೀರ್ ಅವರ ಪುತ್ರಿ ಐಷಾತುಲ್ ಅನಿಷಾ (18ವ) ಅವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಆ.18ರಂದು ವರದಿಯಾಗಿದೆ.
ಅವರು ಮಧ್ಯಾಹ್ನ ವೇಳೆ ಬಟ್ಟೆ ಒಗೆದು ಅದನ್ನು ಒಣಗಿಸಲು ಹಾಕಲು ಹೋದಾಗ ಆಕಸ್ಮಿಕವಾಗಿ ತಮ್ಮ ಮನೆಯ ಬಾವಿಗೆ ಕಾಲು ಜಾರಿ ಬಿದ್ದರೆನ್ನಲಾಗಿದೆ. ಕಣ್ಣಿನ ದೋಷ ಇದ್ದ ಅವರು ಕನ್ನಡಕ ಧರಿಸದೇ ಹೋಗಿರುವುದು ಈ ಘಟನೆಗೆ ಕಾರಣವೆನ್ನಲಾಗಿದೆ. ವೇಣೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸ್ಥಳೀಯರು ಹಾಗೂ ಬೆಳ್ತಂಗಡಿ ಅಗ್ನಿ ಶಾಮಕ ದಳದವರು ಆಗಮಿಸಿ ಮೃತದೇಹವನ್ನು ಮೇಲೆತ್ತಲು ಸಹಕರಿಸಿದರು.

ನಿಮ್ಮದೊಂದು ಉತ್ತರ