ಬೆಂಗಳೂರು: ಸಂಸತ್ತಿನಲ್ಲಿ ವಿದ್ಯುಚ್ಛಕ್ತಿ ಕಾಯ್ದೆ(ತಿದ್ದುಪಡಿ) 2021ರ ಮಸೂದೆ ಪೂರ್ವಕಾರ್ಯಸೂಚಿಯಂತೆಮಂಡಿ
ಸುವುದಿಲ್ಲ ಎಂಬ ಕೇಂದ್ರ ಸಚಿವರ ಭರವಸೆಯ ಹಿನ್ನೆಲೆ ಪ್ರತಿಭಟನೆ ಮುಂದೂಡಲಾಗಿದೆ ಎಂದು ಕರ್ನಾಟಕ ವಿದ್ಯುತ್ ಮಂಡಳಿ ಇಂಜಿನಿಯರುಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಪ್ರಸ್ತುತ ಮುಂಗಾರು ಅಧಿವೇಶನದ ಸಂಸತ್ತಿನಲ್ಲಿ ವಿದ್ಯುಚ್ಛಕ್ತಿ ಕಾಯ್ದೆ (ತಿದ್ದುಪಡಿ) 2021ರ ಮಸೂದೆ
ಯನ್ನು ಪೂರ್ವ ಕಾರ್ಯಸೂಚಿಯಂತೆ ಮಂಡಿಸಲು ಸಿದ್ಧಪಡಿಸಿತ್ತು. ಈ ಹಿನ್ನೆಲೆ ಪ್ರಸ್ತಾವಿತ ತಿದ್ದುಪಡಿ ವಿರೋಧಿಸಲು ಆ.10ರಂದು ರಾಷ್ಟ್ರಾದ್ಯಂತ ಕೆಲಸ ಬಹಿಷ್ಕಾರ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಆ.9ರಂದು ಕೇಂದ್ರ ಸರ್ಕಾರದ ಇಂಧನ ಸಚಿವರ ಹೇಳಿಕೆಯಂತೆ ತಿದ್ದುಪಡಿಯನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಅದೇ ರೀತಿ ರಾಜ್ಯದ ನೂತನ ಇಂಧನ ಸಚಿವರೂ ಪ್ರತಿಭಟನೆ ಕೈ ಬಿಡುವಂತೆ ಕೋರಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಮಾಡೋಣ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಕೆಲಸ ಬಹಿಷ್ಕಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.