ಬೆಳ್ತಂಗಡಿ: ಕಳೆಂಜ ಗ್ರಾಮದ ಕುದ್ದ ಎಂಬಲ್ಲಿ ಕಿಡಿಗೇಡಿಗಳು ಕೋಳಿ ತ್ಯಾಜ್ಯದಲ್ಲಿ ವಿಷ ಬೆರೆಸಿದ ಪರಿಣಾಮ ಹಂದಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.
ಕುದ್ದ ನಿವಾಸಿ ಲಾಲು ವರ್ಕಿ ಎಂಬವರು ತಮ್ಮ ಮನೆಯಿಂದ ತುಸು ದೂರದಲ್ಲಿರುವ ಶೆಡ್‌ನಲ್ಲಿ 6 ದೊಡ್ಡ ಹಂದಿ ಹಾಗೂ 9 ಸಣ್ಣ ಹಂದಿಗಳನ್ನು ಹಾಕುತ್ತಿದ್ದಾರೆ . ಆ.4 ರಂದು ರಾತ್ರಿ ವೇಳೆ ಅವರ ಹಂದಿ ಸಾಕಾಣಿಕಾ ಶೆಡ್‌ನೊಳಗೆ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ವಿಷ ಬೆರೆಸಿದ ಕೋಳಿ ತ್ಯಾಜ್ಯವನ್ನು ಹಂದಿಗಳಿಗೆ ನೀಡಿದ್ದಾರೆ ಎಂದು ಆರೋಪಿ ಸಲಾಗಿದೆ. ವಿಷಪೂರಿತ ತ್ಯಾಜ್ಯವನ್ನು ಸೇವಿಸಿದ ಹಂದಿಗಳು ಅಸ್ವಸ್ಥಗೊಂಡಿದ್ದು, ಈಗಾಗಲೇ ಎರಡು ಹಂದಿಗಳು ಸಾವನ್ನಪ್ಪಿದೆ. ಇನ್ನೆರಡು ಹಂದಿಗಳು ಗಂಭೀರ ಸ್ಥಿತಿಯಲ್ಲಿದೆ ಎಂದು ವರದಿಯಾಗಿದೆ.