* ನದಿ ಬದಿಯಲ್ಲಿ ಚಪ್ಪಲಿ ಪತ್ತೆ
* ಕಾಲು ಜಾರಿ ನದಿಗೆ ಬಿದ್ದು ಕಾಣೆಯಾಗಿರುವ ಶಂಕೆ
ಬೆಳ್ತಂಗಡಿ: ತೋಟದಲ್ಲಿ ನೆಲ ನೆಲ್ಲಿ ತೆಗೆದು ನದಿಯಲ್ಲಿ ತೊಳೆಯಲು ಹೋದ ಮಹಿಳೆ ನದಿಗೆ ಜಾರಿ ಬಿದ್ದು, ನಾಪತ್ತೆಯಾಗಿರುವ ಘಟನೆ ಜು.31ರಂದು ರೆಖ್ಯ ಗ್ರಾಮದಲ್ಲಿ ನಡೆದಿದೆ.
ರೆಖ್ಯ ಗ್ರಾಮದ ಉನ೯ಡ್ಕ ನಿವಾಸಿ ಯು. ಆರ್. ಸುಂದರ ಗೌಡ, ಎಂಬವರ ಪತ್ನಿ ಶ್ರೀ ಮತಿ ಶಕುಂತಳಾ ನದಿಗೆ ಬಿದ್ದು, ನಾಪತ್ತೆ ಯಾದವರು.
ಸುಂದರ ಗೌಡ ಅವರು ಧಮ೯ಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ತನ್ನ ಪತ್ನಿ ಶ್ರೀಮತಿ ಶಕುಂತಲಾ ರವರಿಗೆ ಹಲವು ಸಮಯದಿಂದ ಪಿತ್ತ ಖಾಯಿಲೆ ಇರುವ ಕಾರಣ ತಲೆ ಸುತ್ತುವಿಕೆ ಇದ್ದುದ ರಿಂದ ಅವರು ನಾಟಿ ಔಷಧಿಯಾಗಿ ನೆಲನೆಲೆಯನ್ನು ಕಷಾಯವಾಗಿ ಸೇವಿಸುತ್ತಿದ್ದರು. ಅದರಂತೆ ಈ ದಿನ ಬೆಳಿಗ್ಗೆ 6 ಗಂಟೆ ಸಮಯಕ್ಕೆ ಅವರು ನೆಲನೆಲ್ಲಿಯನ್ನು ತರಲು ತೋಟಕ್ಕೆ ಹೋದವರು ಬೆಳಿಗೆ 6.30 ಗಂಟೆ ಆದರೂ ಮನೆಗೆ ವಾಪಾಸು ಬಾರದೇ ಇದ್ದುದರಿಂದ, ನಾನು ಹಾಗೂ ಮಗ ಅಭಿಷೇಕ್ ಮನೆಯ ಸುತ್ತಮುತ್ತ ತೋಟದ ಬಳಿ ಹುಡುಕಾಡಿದಾಗ ತೋಟದ ಬಳಿ ಇರುವ ಹೊಳೆಯ ಬದಿ ಪತ್ನಿ ಶಕುಂತಳಾ ಅವರ ಚಪ್ಪಲಿ ಪತ್ತೆ ಯಾಗಿರುವುದಾಗಿ ತಿಳಿಸಿದ್ದಾರೆ.
ಶಕುಂತಲ ನೆಲನೆಲ್ಲಿ ತೆಗೆದ ಬಳಿಕ ಅದನ್ನು ತೊಳೆಯಲು ಹೊಳೆಗೆ ಹೋದವರು ಆಕಸ್ಮಿ
ಕವಾಗಿ ಕಾಲುಜಾರಿ ನದಿನೀರಿಗೆ ಬಿದ್ದು ಕಾಣೆಯಾಗಿರುವ ಸಾಧ್ಯತೆ ಇರುತ್ತದೆ ಎಂದು ದೂರಿನಲ್ಲಿ ಸಂಶಯ ವ್ಯಕ್ತಪಡಿ
ಸಿದ್ದಾರೆ. ಈ ಬಗ್ಗೆ ಧಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.