ಬೆಳ್ತಂಗಡಿ:. ಶಾಸಕ ಹರೀಶ್ ಪೂಂಜ ಅವ
ರು 3 ವರ್ಷಗಳಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ ರೂ.833.69 ಕೋಟಿ ಅನುದಾನ ತಂದಿರುವು
ದಾಗಿ ತಾಲೂಕು ಜನತೆಗೆ ತಪ್ಪಾದ ಲೆಕ್ಕ ನೀಡಿದ್ದು,
ಅವರನ್ನು ಬಹಿರಂಗ ಚಚೆ೯ಗೆ ಆಹ್ವಾನ ನೀಡು
ತ್ತಿದ್ದೇನೆ ಎಂದು ಮಾಜಿ ಶಾಸಕ ಕೆ.ವಸಂತಬಂ
ಗೇರ ಸವಾಲು ಹಾಕಿದ್ದಾರೆ.ಅವರು ಜು.27ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅವರು ಪತ್ರಿಕೆಯಲ್ಲಿ ಪ್ರಕಟಿಸಿದ 20 ಇಲಾಖೆಗಳ ಮುಖ್ಯಸ್ಥರನ್ನು ನಾನು ಸಂಪರ್ಕಿಸಿ ದಾಖಲೆಗಳನ್ನು ಸಂಗ್ರಹಿಸಿದ್ದು ಈ ಪೈಕಿ 368.5 ಕೋಟಿ ರೂ. ವ್ಯತ್ಯಾಸವಿದದ್ದು ಜನತೆಗೆ ತಪ್ಪಾದ
ಲೆಕ್ಕ ಕೊಟ್ಟಿದ್ದಾರೆ. ಈ ಬಗ್ಗೆ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದು ಶಾಸಕರು ನಿಗದಿಗೊಳಿಸಿದ ದಿನ ಅಧಿಕಾರಿಗಳನ್ನು ಕರೆದುಕೊಂಡು ಅವರು ನೀಡಿದ
ಲೆಕ್ಕದ ಚರ್ಚೆಗೆ ಎಲ್ಲಿಗೆ ಕರೆದರೂ ನಾನು ಬರಲು ಸಿದ್ದನಿದ್ದೇನೆ ಎಂದರು.
ಶಾಸಕರು ಪ್ರಕಟಿಸಿದ ಲೆಕ್ಕಗಳನ್ನು ಪರಿಶೀಲಿ
ಸಿದಾಗ ಅದರಲ್ಲಿ ಕೆಲವು ಕಾಮಗಾರಿಗಳು ನನ್ನ ಅವಧಿಯಲ್ಲಿ.ಮಂಜೂರಾದು ಸಹ ಸೇರಿದೆ. ಅಲ್ಲದೆ ಕೆಲ ಲೆಕ್ಕವನ್ನು ಎರಡೆರಡು ಇಲಾಖೆಗಳ ಕಾಮಗಾರಿಗಳ ಪಟ್ಟಿಯಲ್ಲಿ ತೋರಿಸಿ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ.ಪಟ್ಟಣ ಪಂಚಾಯತ್ಗೆ ನನ್ನ ಶಾಸಕತ್ವದ ಕಾಮ
ಗಾರಿಗಳ10 ಕೋಟಿ ಅನುದಾನವನ್ನು ಲೆಕ್ಕದಲ್ಲೂ ತೋರಿಸಿರುತ್ತಾರೆ. ಕೆ.ಆರ್.ಐ.
ಡಿಎಲ್, ಸಮಾಜ ಕಲ್ಯಾಣ ಇಲಾಖೆಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದ 5 ಕೋಟಿ ಅನುದಾನವನ್ನು ಕೆ.ಆರ್.ಐ.ಡಿ.ಎಲ್ನ ಲೆಕ್ಕದಲ್ಲೂ ತೋರಿಸಿರುತ್ತಾರೆ .ಕಂದಾಯ ಇಲಾಖೆಗೆ ಈ ಬಾರಿ ಮಂಜೂರಾದ 35 ಲಕ್ಷ ರೂ. ಅನುದಾನವನ್ನು ನಿರ್ಮಿತಿ ಕೇಂದ್ರದ ಲೆಕ್ಕದಲ್ಲೂ ತೋರಿಸಿರುತ್ತಾರೆ. ಅಲ್ಲದೆ ಶಾಸಕರು ಕೊಟ್ಟಿರುವ 20 ಇಲಾಖೆಗಳ ಲೆಕ್ಕದಲ್ಲಿ ಹೆಚ್ಚಿನ ಅನುದಾನಗಳು ಶಾಸಕರ ವಿಶೇಷ ಅನುದಾನಗಳಾಗಿರುವುದಿಲ್ಲ . ಅವುಗಳು ವಾರ್ಷಿಕವಾಗಿ ಇಲಾಖೆಗಳಿಗೆ ಸರಕಾರದಿಂದ ಬರುವಂತಹ ನಿಯತ ಅನುದಾನಗಳಾಗಿರುತ್ತವೆ . ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದು ಶಾಸಕರಾದ ಹರೀಶ್ ಪೂಂಜರವರು ಅಪೇಕ್ಷಿಸಿದಲ್ಲಿ ಪ್ರತಿಗಳನ್ನು ಅವರ ಕಛೇರಿಗೆ ತಲುಪಿಸಲು ಬದ್ಧನಾಗಿರುತ್ತೇನೆ. ನಾನು ಶಾಸಕರ ಲೆಕ್ಕದ ಬಗ್ಗೆ ಸದ್ರಿ20ಇಲಾಖೆಗಳ ಮುಖ್ಯಸ್ಥರನ್ನು ಸಂಪರ್ಕಿ
ಸಿದಾಗಅವರುಪ್ರಾಮಾಣಿಕವಾಗಿ ಅವುಗಳಲ್ಲಿ ನಾನು ಶಾಸಕನಾಗಿದ್ದ ಕಾಲದ ಅನುದಾನ ಕೂಡ ಸೇರ್ಪಡೆಗೊಂಡಿದೆ. ಅದೇ ರೀತಿ ಶಾಸಕರು ಕೊಟ್ಟ ಲೆಕ್ಕದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿ ಸೋಜಾ, ಹಾಲಿ ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ರವರ ಅನುದಾನಗಳು ಕೂಡ ಸೇರಿದೆ. ಆದ್ದರಿಂದ, ನಾನು ಈ ಮೂಲಕ ಶಾಸಕ ಹರೀಶ್ ಪೂಂಜಾರವರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಂದು ವೇಳೆ ಅವರು 833.69 ಲಕ್ಷ ಅವರೇ ತರಿಸಿದ್ದು ಎನ್ನುವ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅಲ್ಲಿಯೇ ಅವರನ್ನು ತಾಲೂಕಿನ ಜನರೆಯ ಪರವಾಗಿ ಅಲ್ಲಿಯೇ ಅಭಿನಂದಿಸಲು ನಾನು ಬದ್ಧನಾ
ಗಿರುತ್ತೇನೆ ಎಂದರು.ಪತ್ರಿಕಾ ಗೋಷ್ಠಿಯಲ್ಲಿ ಪ ಕ್ಷದವಕ್ತಾರ,ನ್ಯಾಯವಾದಿ ಮನೋಹರ್ ಕುಮಾರ್ ಮತ್ತು ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಅವರು ಇಲಾಖಾವಾರು ವಿವರ ನೀಡಿದರು.ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಡು, ತಾ.ಪಂ ಮಾಜಿ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ ಮಾಜಿ ಸದಸ್ಯರುಗಳಾದ ಓಬಯ್ಯ, ಜಯರಾಮ ಆಲಂಗಾರು, ಪ್ರವೀಣ್, ಜಯಶೀಲಾ ಮತ್ತು ಸುಶೀಲಾ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಉಪಸ್ಥಿತರಿದ್ದರು.