ಗ್ರಾಮಾಂತರ ಸುದ್ದಿ

ಭಾರತೀಯ ಮಜ್ದೂರ್ ಸಂಘದಿಂದ ಶಾಸಕರಿಗೆ ಸನ್ಮಾನ

ಬೆಳ್ತಂಗಡಿ: *ಭಾರತೀಯ ಮಜ್ದೂರ್ ಸಂಘ ತಾಲ್ಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಬೆಳ್ತಂಗಡಿ ಯ ಕಟ್ಟಡ ಕಾರ್ಮಿಕರಿಗೆ ಹೆಚ್ಚುವರಿ ಅಹಾರ ಕಿಟ್ ಒದಗಿಸಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಪ್ರತೀ ಗ್ರಾಮ ಪಂಚಾಯತ್ ಗಳಿಗೆ ಕಿಟ್ ಗಳನ್ನು ಕಳುಹಿಸಿ ಕಾರ್ಮಿಕರಿಗೆ ಅನುಕೂಲಕರ ಮಾಡಿದ ಬಗ್ಗೆ ಸಮಿತಿ ವತಿಯಿಂದ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹ ರೀಶ ಪೂಂಜ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿ.ಎಂ.ಎಸ್ ನ ತಾಲೂಕು ಅಧ್ಯಕ್ಷರಾದ ಉದಯ ಬಿ.ಕೆ.. ಬಿ.ಎಂ ಎಸ್. ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ , ಹಾಗೂ ತಾಲ್ಲೂಕು ಸಮಿತಿ ಸದಸ್ಯರಾದ ವಿಜಯ ಜಿ ಅರಳಿ ,ದಿವಾಕರ ಗೇರುಕಟ್ಟೆ ಅವರು ಉಪಸ್ಥಿತರಿದ್ದರು*

ನಿಮ್ಮದೊಂದು ಉತ್ತರ