ಬೆಳ್ತಂಗಡಿ : ನೆಲ್ಯಾಡಿಯ ವಿಕಲಚೇತನ ಯುವತಿ
ಯನ್ನು ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ಬೆಳಾಲು ಗ್ರಾಮದ ಯುವಕನೋ
ರ್ವಆಕೆಗೆಹೊಸಬಾಳುನೀಡಿಗ್ರಾಮಸ್ಥರಿಂದಪ್ರಸಂಶೆಗೆ ಪಾತ್ರರಾಗಿದ್ದಾರೆ. ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ನೇರೋಳ್ಪ ದಿ.ನರಸಿಂಹ ಹಾಗೂ ಲೋಕೇಶ್ವರಿ ದಂಪತಿಯ ಪುತ್ರ ವಿನಾಯಕ ಯಾನೆ ಮಂಜುನಾಥ್(36ವ.) ಹಾಗೂ ಕಡಬತಾಲೂಕು
ನೆಲ್ಯಾಡಿ ಗ್ರಾಮದ ಪಟ್ಟೆಜಾಲು ನಿವಾಸಿ ರಮೇಶ ಹಾಗೂ ದೇವಿಕಾ ದಂಪತಿಯ ಪುತ್ರಿ, ವಿಕಲಚೇತನೆ ಸಹನಾ(25ವ.) ವಿವಾಹ ಜೂ.28ರಂದು ದೋಂತಿಲ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ನಡೆಯಿತು. ಸಹನಾ ಪಿಯುಸಿ ತನಕ ಕಲಿತಿದ್ದಾರೆ. ಹುಟ್ಟು ಅಂಗವಿಕಲೆಯಾಗಿರುವ ಸಹನಾರ ಎರಡೂ ಕಾಲುಗಳು ಬಲಹೀನವಾಗಿವೆ. ಈಕೆ ಗ್ರಾ.ಪಂ.ಪುನರ್ವಸತಿ ಕಾರ್ಯಕರ್ತೆಯಾಗಿ ಆಯ್ಕೆಯಾಗಿದ್ದರೂ ಕೆಲಸಕ್ಕೆ ಸೇರಲಿಲ್ಲ. ಸಹನಾಳ ಪೋಷಕರು ಕೃಷಿ ಹಾಗೂ ಹೈನುಗಾರಿಕೆ ವೃತ್ತಿ ಮಾಡುತ್ತಿದ್ದಾರೆ. ಸಹನಾಗೆ ಇಬ್ಬರು ಸಹೋದರಿಯರಿದ್ದಾರೆ. ಈಕೆಗೆ ಬಾಳುಕೊಟ್ಟಿರುವ ಬೆಳ್ತಂಗಡಿ ತಾಲೂಕಿನ ಬೆಳಾಲಿನ ಯುವಕ ವಿನಾಯಕ ಯಾನೆ ಮಂಜುನಾಥ್ ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದು ತಾಯಿಯ ಜೊತೆಗೆ ನೆಲ್ಯಾಡಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು ನೆಲ್ಯಾಡಿಯ ಖಾಸಗಿ ಸಂಸ್ಥೆಯೊಂದರ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರನ್ನು ಒಂದುಗೂಡಿಸಿದ್ದು,
ನೆಲ್ಯಾಡಿ ಗ್ರಾಮದ ಕೊಲ್ಯೂಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸಂಪಾವತಿಬಾಲಕೃಷ್ಣ ಶೆಟ್ಟಿ ಪಟ್ಟೆಜಾಲು(ಹುಡುಗನ ಕಡೆ) ಹಾಗೂ ಆಶಾ ಕಾರ್ಯಕರ್ತೆ ಪೂರ್ಣಿಮಾ(ಹುಡುಗಿಯ ಕಡೆ)ರವರು. ಪುರೋಹಿತ ಪದ್ಮನಾಭ ನೂಜಿನ್ನಾಯರವರು ಯುವ ಜೋಡಿಗೆ ಮಾಂಗಲ್ಯಧಾರಣೆ ಮಾಡಿಸಿದರು. ಭಾಗೀರಥಿ, ಬಾಲಕೃಷ್ಣ ಶೆಟ್ಟಿ, ಮಂಜುಳ, ಉಮೇಶ್ ಗೌಡ ಕೊನೆಮಜಲು, ಸತ್ಯಾವತಿ, ಧರ್ಣಪ್ಪ ಹೆಗ್ಡೆ ಪಟ್ಟೆಜಾಲು, ಗಿರಿಜ, ಶಾಂತಪ್ಪ ಹೆಗ್ಡೆ ಪಟ್ಟಿಜಾಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ವಧುವರರನ್ನು ಆಶೀರ್ವದಿಸಿದರು. ವಿಕಲಚೇತನೆ ಸಹನಾರನ್ನು ಪತ್ನಿಯಾಗಿ ಸ್ವೀಕರಿಸಿ, ಆಕೆಗೆ ಜೊತೆಯಾಗಿ ಜೀವನ ನಡೆಸಲು ಮುಂದಾಗಿರುವ ವಿನಾಯಕ ಯಾನೆ ಮಂಜುನಾಥ್ರವರ ದಿಟ್ಟ ನಿರ್ಧಾರಕ್ಕೆ ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತವಾಗಿದೆ.