ಕ್ರೈಂ ವಾರ್ತೆ

ರಬ್ಬರ್ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಾಸಯಿಖಾನೆಗೆ ಪೊಲೀಸರ ದಾಳಿ: ಇಬ್ಬರು ಆರೋಪಿಗಳ ಬಂಧನ

ಕಳೆಂಜ: ಇಲ್ಲಿಯ ಕುಡುಪ್ಪಾರು ಎಂಬಲ್ಲಿಯ ರಬ್ಬರ್ ತೋಟದಲ್ಲಿ ನಡೆಯುತ್ತಿದ್ದ ಅಕ್ರಮ ಕಾಸಯಿಖಾನೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, 3 ಕ್ವಿಂ
ದನದ ಮಾಂಸ ವಶಪಡಿಸಿಕೊಂಡ ಘಟನೆ ಮೇ.26 ರಂದು ವರದಿಯಾಗಿದೆ.


ಕಳೆಂಜ ಗ್ರಾಮದ ಕುಡುಪ್ಪಾರು ನಿವಾಸಿ ಬೇಬಿ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಬೇಬಿ ಹಾಗೂ ಕೈರೋಡಿ ನಿವಾಸಿ ಸೆಬಾಸ್ಟಿಯನ್ ರವರ ಪುತ್ರ ಪ್ರಿನ್ಸ್ ಎಂಬವರು ಅಕ್ರಮವಾಗಿ ದನವನ್ನು ಕೊಂದು ಮಾಂಸ ಮಾಡುವ ಕೃತ್ಯದಲ್ಲಿ ನಿರತರಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪವನ್ ನಾಯಕ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ನಡೆಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರುಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಸುಮಾರು 3 ಕ್ವಿಂಟಾಲ್ ತೂಕದ ದನದ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

 

ನಿಮ್ಮದೊಂದು ಉತ್ತರ