ಬೆಳ್ತಂಗಡಿ: ಮೂಡಬಿದ್ರೆ ಸಮೀಪದ ಶಿರ್ತಾಡಿಯಲ್ಲಿ ಗೂಡ್ಸ್ ಟೆಂಪೋ ಮತ್ತು ಲಾರಿ ಮದ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಉಜಿರೆಯ ಯುವಕನೋರ್ವ ದಾರುಣವಾಗಿ ಮತಪಟ್ಟ ಘಟನೆ ಎ.24ರಂದು ವರದಿಯಾಗಿದೆ.
ಉಜಿರೆಯ ನೇಕಾರ ಪೇಟೆಯ ನಿವಾಸಿ ಲಾಯಿಲ ತಾ.ಪಂ ಮಾಜಿ ಸದಸ್ಯೆ ಶೋಭಾ ಶೆಟ್ಟಿಯವರ ದ್ವೀತಿಯ ಪುತ್ರ ಭವಿಷ್ ಶೆಟ್ಟಿ (33ವ) ಈ ದುರ್ಘನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಅಮೆಜಾನ್ ಕಂಪೆನಿಯಲ್ಲಿ ಮೂಡಬಿದ್ರೆಯಲ್ಲಿ ಉದ್ಯೋಗದಲ್ಲಿರುವ ಇವರು ಪಾರ್ಸೆಲ್ ಡೆಲಿವರಿ ಕೊಟ್ಟು ಹಿಂದುರುಗುತ್ತಿದ್ದ ವೇಳೆ ಶಿರ್ಲಾಡಿಯಲ್ಲಿ ಇವರಿದ್ದ ಗೂಡ್ಸ್ ಟೆಂಪೋ ಮತ್ತು ಲಾಾರಿ ನಡುವೆ ಡಿಕ್ಕಿ ನಡೆಯಿತು.
ಇದರಿಂದಾಗಿ ಭವಿಷ್ ಶೆಟ್ಟಿ ಅವರಿಗೆ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಕೂಡಲೇ ಅವರನ್ನು ಪಕ್ಕದ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.