ತಾಲೂಕು ಸುದ್ದಿ

ಮೃತ ಸನತ್ ಶೆಟ್ಟಿ ಮನೆಗೆ ಶಾಸಕರ ಭೇಟಿ : ಪ್ರಕೃತಿ ವಿಕೋಪದಡಿ ರೂ.5 ಲಕ್ಷ ಪರಿಹಾರ ಚೆಕ್ ಹಸ್ತಾಂತರ

ಬೆಳ್ತಂಗಡಿ: ಬಂಗಾರಪಲ್ಕೆ ಜಲಪಾತದಲ್ಲಿ ಮೃತಪಟ್ಟ ಉಜಿರೆಯ ನಿವಾಸಿ ವಿದ್ಯಾರ್ಥಿ ಸನತ್ ಶೆಟ್ಟಿ ಅವರ ತಂದೆ ವಾಸುದೇವ ಶೆಟ್ಟಿಯವರ ಕಾಶಿಬೆಟ್ಟು ಮನೆಗೆ ಫೆ.17ರಂದು ಬೆಳಗ್ಗೆ ಶಾಸಕ ಹರೀಶ್ ಪೂಂಜ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಪ್ರಕೃತಿ ವಿಕೋಪ ನಿಧಿಯಿಂದ ಮಂಜೂರಾದ ರೂ.5 ಲಕ್ಷ ಪರಿಹಾರದ ಮೊತ್ತದ ಚೆಕ್‌ನ್ನು ವಾಸುದೇವ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಭಾರ ತಹಶೀಲ್ದಾರ್ ಸುರೇಶ್ ಬಾಬು, ಲಾಯಿಲ ತಾ.ಪಂ ಸದಸ್ಯ ಸುಧಾಕರ್ ಬಿ.ಎಲ್, ಲಾಯಿಲ  ಗ್ರಾ.ಪಂ ಅಧ್ಯಕ್ಷೆ ಆಶಾಬೆನಡಿಕ್ಟ ಸಾಲ್ಡಾನಾ, ಉಪಾಧ್ಯಕ್ಷ ಗಣೇಶ್,ಸದಸ್ಯರಾದ ಪ್ರಸಾದ್ ಶೆಟ್ಟಿ ಏಣಿಂಜೆ, ಮಹೇಶ್, ಮೃತರ ತಾಯಿ, ಸಹೋದರ, ಬಂಧುವರ್ಗದವರು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ