ಬೆಳ್ತಂಗಡಿ: ವರದಕ್ಷಿಣೆ ಕಿರುಕುಳಕ್ಕೆ ಮಲವಂತಿಗೆ ಗ್ರಾಮದ ವಿವಾಹಿತೆ ಬಲಿಯಾಗಿರುವ ಬಗ್ಗೆ ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಲಾಗಿದೆ.
ಮೂಡಿಗೆರೆ ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ನಡೆದಿದೆ. ಸುಭಿಕ್ಷಾ (25) ಮೃತ ದುರ್ದೈವಿ.
ಮಲವಂತಿಗೆ ಗ್ರಾಮದ ಚೆನ್ನೆಗೌಡರ ಮಗಳಾಗಿರುವ ಸುಭಿಕ್ಷಾ ಅವರನ್ನು ವರ್ಷಗಳ ಹಿಂದೆ ಚಂದುವಳ್ಳಿಯ ಪ್ರವೀಣ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಒಂದು ಗುಂಡು ಮಗುವಿದೆ. ಆ.19ರಂದು ಸಂಜೆ 4 ಗಂಟೆಗೆ ಸುಭಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮಗಳಿಗೆ ವರದಕ್ಷಿಣೆ ನೀಡುತ್ತಿದ್ದರು ಎಂದು ಆಕೆಯ ಕುಟುಂಬಸ್ಥರು ಆರೋಪಿ ನೀಡಿದ ದೂರಿನಂತೆ. ಸುಭೀಕ್ಷಾ ಗಂಡ ಪ್ರವೀಣ್, ಅತ್ತೆ ಲಕ್ಷ್ಮಿ, ಮಾವ ಚಂದ್ರೇಗೌಡ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.